ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಯಮಕನಮರಡಿಯಲ್ಲಿ ಹಮ್ಮಿಕೊಂಡಿದ್ದ ಸತೀಶ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಭಾನುವಾರ ಸನ್ಮಾನಿಸಲಾಯಿತು.
ಡಾ.ಅನಿಲ ನಂಜನ್ನವರ (ವೈದ್ಯಕೀಯ), ಶಿವಾಜಿ ಕಳವಿಕಟ್ಟಿ (ಶಿಕ್ಷಣ), ಭರಮಾ ದುಪದಾಳಿ (ಕೃಷಿ), ಪ್ರಜ್ವಲಕುಮಾರ ತಳವಾರ (ಕ್ರೀಡೆ), ರೂಪಾ ಕಡಗಾವಿ (ಸಂಗೀತ) ಹಾಗೂ ಅಡಿವೆಪ್ಪ ನಾಯಿಕ ಅವರ ಸಾಮಾಜಿಕ ಕ್ಷೇತ್ರದ ಸೇವೆ ಪರಿಗಣಿಸಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಯುವ ಧುರೀಣ ರಾಹುಲ್ ಜಾರಕಿಹೊಳಿ ಸನ್ಮಾನಿಸಿದರು.
ರಿಯಾಜ ಚೌಗಲಾ, ಕಿರಣಸಿಂಗ್ ರಜಪೂತ, ಶಶಿ ಹಟ್ಟಿ, ಸುರೇಶ ಜೀರಾಪುರೆ, ಡಿಡಿಪಿಐ ಲೀಲಾವತಿ ಹಿರೇಮಠ, ಈರಣ್ಣ ಬಿಸಿರೊಟ್ಟಿ, ರವಿ ಜಿಂಡ್ರಳಿ ಇತರರಿದದ್ದರು.