ಕಂಪ್ಲಿ: ಸಣಾಪುರ ರಸ್ತೆಯ ವೀರಶೈವ ಸಂಘದ ಶಾಲಾ ಆವರಣದಲ್ಲಿ ನ.30ರಂದು ಪಟ್ಟಣದ ಕನ್ನಡ ಹಿತರಕ್ಷಕ ಸಂಘದ 54ನೇ ವಾರ್ಷಿಕೋತ್ಸವ ಮತ್ತು 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೆ.ಎಂ.ವೀರಸಂಗಯ್ಯ, ದರೋಜಿ ಅಶ್ವ ರಾಮಣ್ಣ, ವಿಜಯನಗರ ಜನಪದ ಕಿನ್ನಾಳ ಕಲೆ ಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಸದಸ್ಯ ಮೋಹನ ಕುಮಾರ ದಾನಪ್ಪ, ಸಂಗೀತ ಕಲಾವಿದ ಜ್ಞಾನೇಶ ಎಮ್ಮಿಗನೂರು, ಸಾಧಕರಾದ ಬಿಂಗಿ ತೇಜಸ್ವಿನಿ, ಪಿ.ಪರಮೇಶ ಹಾಗೂ ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಪೂರ್ಣ ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಗೌರವ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಅಧ್ಯಕ್ಷ ಬೂದುಗುಂಪಿ ಅಂಬಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.