ಮಡಿಕೇರಿ: ಶ್ರೀಮಂಗಲ ಕಂಪನಿ ಕಲ್ಚರ್ ಅಸೋಸಿಯೇಷನ್ ವತಿಯಿಂದ ಗೌಡ ಜನಾಂಗದವರಿಗೆ ಅ.12, 13ರಂದು ಜಿಲ್ಲಾ ಒಳಾಂಗಣ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ‘ಸಿಎಸ್ಪಿಆರ್ ಟೂರ್ನಮೆಂಟ್’(ಚಿನ್ನಪ್ಪ, ಸುಬ್ರಾಯ, ಪೂವಯ್ಯ, ರಾಮಪ್ಪ) ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ನ ಅಧ್ಯಕ್ಷ ಅಯ್ಯಂಡ್ರ ಎರ್.ಭೀಮಯ್ಯ ತಿಳಿಸಿದ್ದಾರೆ.
ಅಸೋಸಿಯೇಷನ್ ವತಿಯಿಂದ 2006 ಮತ್ತು 2013ರಲ್ಲಿ ಆಯೋಜಿಸಲಾಗಿತ್ತು. ಗೌಡ ಜನಾಂಗದ(ಹತ್ತುಕುಟುಂಬ, ಹದಿನೆಂಟು ಗೋತ್ರದವರಿಗೆ) ಕುಟುಂಬವಾರು 3ನೇ ವರ್ಷದ ಪಂದ್ಯಾಟ ಆಯೋಜಿಸಲಾಗಿದೆ. ಒಂದು ಕುಟುಂಬದಿಂದ 1 ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆಸಕ್ತರು ಸೆ.21ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಾಧ್ಯಕ್ಷ ದಂಬೆಕೋಡಿ ಎಸ್.ಹರೀಶ್ ಮಾತನಾಡಿ, ದಂಬೆಕೋಡಿ, ಪೇರಿಯನ, ಅಯ್ಯಂಡ್ರ, ಕೆದಂಬಾಡಿ 4 ಕುಟುಂಬದವರ ಶ್ರಮದಿಂದ ಕಂಪನಿ ಅಸ್ತಿತ್ವಕ್ಕೆ ಬಂದಿದೆ. ಇವರ ನೆನಪಿಗಾಗಿ ‘ಸಿಎಸ್ಪಿಆರ್ ಟೂರ್ನಮೆಂಟ್’ ಆಯೋಜಿಸಲಾಗಿದೆ. 12 ವರ್ಷ ಕೆಳಗಿನವರಿಗೆ, 13-25, 26 ವಯಸ್ಸು ಮೇಲ್ಪಟ್ಟವರಿಗೆ ಸೇರಿ ಒಟ್ಟು 13 ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ. ಕುಟುಂಬದಿಂದ ಒಂದು ತಂಡಕ್ಕೆ ಅವಕಾಶವಿದ್ದು, ಆಸಕ್ತರು ಕೆಳಗಿನ ಗೌಡ ಸಮಾಜದ ಮ್ಯಾನೇಜರ್ ಬೊಳ್ತಜಿ ಅಶೋಕ್(ಮೊ.9448503524) ಸಂಪರ್ಕಿಸಬಹುದು. ಕ್ರೀಡಾಕೂಟ ಸಮಾರೋಪ ಸಮಾರಂಭ ನಗರದ ಕೆಳಗಿನ ಗೌಡ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಪೇರಿಯನ.ಪಿ.ನವೀನ್, ಕಾರ್ಯದರ್ಶಿ ಕೆದಂಬಾಡಿ.ಸಿ.ಪುರುಷೋತ್ತಮ, ನಿರ್ದೇಶಕರಾದ ದಂಬೆಕೋಡಿ ಪೂವಯ್ಯ, ಪೇರಿಯನ ಜಯಾನಂದ್ ಇದ್ದರು.