More

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೂ ಒಳ್ಳೆಯದು ಈ ತಂಬುಳಿ..

    ವಿಟಮಿನ್ ‘ಸಿ’ ಆಗರವಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ ಹಾಗೂ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಬಾಳೆದಿಂಡಿನಿಂದ ಮಾಡಬಹುದಾದ ಕೆಲವು ವ್ಯಂಜನಗಳು ಇಲ್ಲಿವೆ..

    ನೆಲ್ಲಿಕಾಯಿ ತಂಬುಳಿ

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೂ ಒಳ್ಳೆಯದು ಈ ತಂಬುಳಿ..ಬೇಕಾಗುವ ಸಾಮಗ್ರಿಗಳು: 4-5ನೆಲ್ಲಿಕಾಯಿ ಅರ್ಧ ಕಪ್ ಕಾಯಿ ತುರಿ ಚಿಟಿಕೆ ಸಾಸಿವೆ ಚೂರು ಒಣ ಮೆಣಸು ಇಂಗು ಉಪ್ಪು ಕಾಲು ಕಪ್ ಮಜ್ಜಿಗೆ

    ಮಾಡುವ ವಿಧಾನ : ಮೊದಲು ನೆಲ್ಲಿಕಾಯಿಯನ್ನು ಹೋಳುಗಳಾಗಿ ಬಿಡಿಸಿಟ್ಟುಕೊಂಡು ಮಿಕ್ಸಿ ಜಾರ್ನಲ್ಲಿ ಉಪ್ಪು ಕಾಯಿತುರಿಯ ಜತೆಗೆ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಆ ಮಿಶ್ರಣಕ್ಕೆ ಮೆಣಸಿನಕಾಯಿ ್ಝಾಸಿವೆ ್ಝಂಗಿನಿಂದ ಒಗ್ಗರಣೆ ಕೊಡಿ. ತೆಗೆದಿಟ್ಟ ಮಜ್ಜಿಗೆಯನ್ನು ಅದಕ್ಕೆ ಸೇರಿಸಿ. ಅನ್ನದ ಜತೆ ಸವಿಯಿರಿ.

    ನೆಲ್ಲಿಕಾಯಿ ಚಟ್ನಿ

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೂ ಒಳ್ಳೆಯದು ಈ ತಂಬುಳಿ..ಬೇಕಾಗುವ ಸಾಮಗ್ರಿ : 4 ಬೆಟ್ಟದ ನೆಲ್ಲಿಕಾಯಿ 1 ಕಪ್ ಕಾಯಿತುರಿ 2 ಹಸಿಮೆಣಸು (ಜೀರಿಗೆ ಮೆಣಸಿನ ಕಾಯಿಯಾದರೆ ಇನ್ನೂ ರುಚಿ) ಉಪ್ಪು ಒಗ್ಗರಣೆಗೆ ಸಾಸಿವೆ ಇಂಗು ಬೇವಿನಸೊಪ್ಪು. ವಿಧಾನ: ಕಾಯಿತುರಿಯ ಜತೆ ನೆಲ್ಲಿಕಾಯಿ ಹೋಳು, ಮೆಣಸಿನಕಾಯಿ, ಉಪ್ಪು ಹಾಕಿ ರುಬ್ಬಿಕೊಳ್ಳಿ. ನಂತರ ಸಾಸಿವೆ, ಕರಿಬೇವು ಹಾಗೂ ಇಂಗು ಹಾಕಿ ಒಗ್ಗರಣೆ ಕೊಡಿ.

     

     

    ಬಾಳೆದಿಂಡಿನ ಸಾಸಿವೆ

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೂ ಒಳ್ಳೆಯದು ಈ ತಂಬುಳಿ..ಬೇಕಾಗುವ ಸಾಮಗ್ರಿಗಳು: 1 ಕಪ್ ಬಾಳೆ ದಿಂಡು 1 ಕಪ್ ಕಾಯಿತುರಿ 1 ಹಸಿಮೆಣಸು 1 ಕಪ್ ಮೊಸರು 1 ಚಮಚ ಸಾಸಿವೆ ಅರಿಶಿಣ ಉಪ್ಪು ರುಚಿಗೆ ತಕ್ಕಷ್ಟು ಒಗ್ಗರಣೆಗೆ ಎಣ್ಣೆ ಒಣಮೆಣಸಿನಕಾಯಿ. ವಿಧಾನ : ಕಾಯಿತುರಿಯ ಜತೆ ಹಸಿಮೆಣಸು, ಸಾಸಿವೆ, ಅರಿಶಿಣ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣಲೆಗೆ ಒಣ ಮೆಣಸಿನಕಾಯಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ ಕೊಂಡು ಬಾಳೆದಿಂಡಿನ ಹೋಳನ್ನು ಹಾಕಿ ಬೇಯಿಸಿರಿ. ನಂತರ ಬಿಸಿ ಆರಿದ ಮೇಲೆ ರುಬ್ಬಿಕೊಂಡ ಮಿಶ್ರಣ ಹಾಗೂ ಮೊಸರು ಹಾಕಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅನ್ನದ ಜತೆ ಸವಿಯಿರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts