ಮಸ್ಕಿ: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಧರಣಿ ಶುಕ್ರವಾರ ಐದು ದಿನ ಪೂರೈಸಿತು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಮಾತನಾಡಿ, ನಮ್ಮ ಬೇಡಿಕೆಗಳು ಈಡೇರುವ ತನಕ ಧರಣಿ ನಿಲ್ಲದು. ಈಗಾಗಲೇ ರಾಜ್ಯ ಘಟಕ ಸುದೀರ್ಘವಾಗಿ ಚರ್ಚಿಸಿ ಕಠಿಣ ನಿರ್ಧಾರ ತೆಗೆದುಕೊಂಡಿದೆ.
ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಿದ್ದರೆ ಕ್ಷಮೆ ಕೇಳುತ್ತೇವೆ. ಧರಣಿ ಸ್ಥಗಿತಗೊಂಡ ಕೂಡಲೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಪ್ರಮುಖರಾದ ಗಂಗಪ್ಪ ಪವಾರ, ಶಿವಪ್ಪ, ರಾಠೋಡ, ಎಂ.ರಾಘವೇಂದ್ರ, ಪ್ರಕಾಶ, ಶಿವಲೀಲಾ, ಅನಿತಾ ಇತರರಿದ್ದರು.