ಸಿಂಧನೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಕೈಗೊಂಡ ಧರಣಿ ಶನಿವಾರ ಆರು ದಿನ ಪೂರೈಸಿತು.
ಇದನ್ನೂ ಓದಿ: ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ
ಮುಷ್ಕರ ಬೆಂಬಲಿಸಿದ ಟಿಯುಸಿಐಯ ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ ಮಾತನಾಡಿ, ಇದು ಎರಡನೇ ಹಂತದ ಮುಷ್ಕರವಾಗಿದ್ದು, ರಾಜ್ಯಾದ್ಯಂತ 8 ಸಾವಿರಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದಾರೆ. ಬೇಡಿಕೆಗಳು ಕಾನೂನು ಸಮ್ಮತವಾಗಿದ್ದು.
ಸರ್ಕಾರ ಈಡೇರಿಸಬೇಕಾಗಿದೆ. ಒಬ್ಬ ಗ್ರಾಮ ಆಡಳಿತ ಅಧಿಕಾರಿ ಕನಿಷ್ಠ ಐದು, ಗರಿಷ್ಠ 10 ಹಳ್ಳಿಗಳಲ್ಲಿ ಕಂದಾಯ ಇಲಾಖೆ ಎಲ್ಲ ದಾಖಲೆಗಳ ನಿರ್ವಹಣೆ, ಆಸ್ತಿ ಪಾಸ್ತಿಗಳ ವರ್ಗಾವಣೆ ಪ್ರಸ್ತಾವ, ಜನನ ಮರಣ, ಬರ, ಪ್ರಕೃತಿ ವಿಕೋಪ, ಕೃಷಿ ಸಂಬಂಧಿತ ಸಮೀಕ್ಷೆಗಳು ಹೀಗೆ ಹತ್ತಾರು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ. ಆದರೆ, ಸರ್ಕಾರ ಅಗತ್ಯ ಸೌಲಭ್ಯ, ಉಪಕರಣಗಳು ಹಾಗೂ ಸೂಕ್ತ ವೇತನ ನೀಡುತ್ತಿಲ್ಲ. ವಿಎಒಗಳ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಉಪಾಧ್ಯಕ್ಷ ಹನುಮಂತ ಗೋಡ್ಯಾಳ, ಸಿಪಿಐ(ಎಂಎಲ್)ರೆಡ್ ಸ್ಟಾರ್‌ನ ಎಚ್.ಆರ್.ಹೊಸಮನಿ, ಪ್ರಮುಖರಾದ ಮುದಿಯಪ್ಪ ಹನುಮನಗರಕ್ಯಾಂಪ್, ಧರಗಯ್ಯ, ಕೆ.ಮರಿಯಪ್ಪ ದಸಂಸ, ಗುರುರಾಜ ಮುಕ್ಕುಂದ, ದುರುಗೇಶ ಬಾಲಿ, ಮೌನೇಶ ಜಾಲವಾಡಗಿ, ಮಹಾಂಕಾಳೆಪ್ಪ ಮಲ್ಲಾಪುರ ಇತರರಿದ್ದರು.