20.6 C
Bengaluru
Friday, January 24, 2020

ಮತ್ತೆ ದಾಖಲೆಯತ್ತ ಸಾಗಲಿದೆ ವಂದೇಮಾತರಂ ರಾಷ್ಟ್ರಗಾನ

Latest News

ದಾಸರು, ಶರಣ ವಚನಗಳಿಂದ ಜಾಗೃತಿ

ಧಾರವಾಡ: ನಾಡಿನಲ್ಲಿ ಆಗಿ ಹೋಗಿರುವ ಹರಿದಾಸರು, ಶರಣರು ಜನಸಾಮಾಮಾನ್ಯರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಕನ್ನಡದಲ್ಲಿ ಸರಳ ಕೀರ್ತನೆ, ವಚನಗಳನ್ನು ರಚಿಸಿ ಜಾಗೃತಿ ಉಂಟು...

ಕುಡಿವ ನೀರಿನ ಟ್ಯಾಂಕ್ ಸ್ವಚ್ಛತೆಗೆ ಆಗ್ರಹ

ಹಿರಿಯೂರು: ಕುಡಿವ ನೀರಿನ ಟ್ಯಾಂಕ್ ಸ್ವಚ್ಛತೆ ಹಾಗೂ ಗ್ರಾಮ ನೈರ್ಮಲ್ಯಕ್ಕೆ ಆಗ್ರಹಿಸಿ ಗುರವಾರ ತಾಲೂಕಿನ ಖಂಡೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕುಡಿವ ನೀರಿನ ಟ್ಯಾಂಕ್‌ಗಳಲ್ಲಿ...

ಬೀದಿ ನಾಯಿಗಳಿಗೆ ‘ಬಾಟಲಿ ಬೆರ್ಚಪ್ಪ’

ಧಾರವಾಡ: ಧಾರವಾಡದ ಹೊಸಯಲ್ಲಾಪುರದ ಬೀದಿಗಳಲ್ಲಿ ಪ್ರತಿ ಮನೆಯ ಮುಂದೆಯೂ ಪೆಟ್ರೋಲ್ ಬಣ್ಣದ ದ್ರಾವಣ ತುಂಬಿರುವ ಬಾಟಲಿಗಳು ನೇತಾಡುತ್ತಿವೆ. ಇದು ಬೀದಿ ನಾಯಿಗಳ ಕಾಟಕ್ಕೆ...

ಸಮೃದ್ಧಿ-ಸಂತೃಪ್ತಿ ಮಹಿಳಾ ಸಮಾವೇಶ ನಾಳೆ

ಹುಬ್ಬಳ್ಳಿ: ಮಹಿಳೆಯರಲ್ಲಿನ ಪ್ರಾಮಾಣಿಕತೆ ಹಾಗೂ ನಾಯಕತ್ವದ ಗುಣ ಬಳಸಿಕೊಂಡು ನವೀಕರಿಸಬಹುದಾದ ಇಂಧನ ಮೂಲ ಸೌರಶಕ್ತಿ ಬಳಕೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಸಲುವಾಗಿ...

ಅಂತೂ ಆರಂಭವಾಗಲಿದೆ ಹೊಸೂರು ಬಸ್ ನಿಲ್ದಾಣ

ಹುಬ್ಬಳ್ಳಿ: ಫೆ. 2ರಂದು ಬಿಆರ್​ಟಿಎಸ್ ಯೋಜನೆ ಲೋಕಾರ್ಪಣೆ ಜೊತೆಗೆ ಇಲ್ಲಿಯ ಹೊಸೂರ ಇಂಟರ್​ಚೇಂಜ್ ಹಾಗೂ ಪ್ರಾದೇಶಿಕ ಸಾರಿಗೆ ಬಸ್ ನಿಲ್ದಾಣ ಕೂಡ ಉದ್ಘಾಟನೆಯಾಗಲಿದ್ದು,...

| ಅವಿನ್ ಶೆಟ್ಟಿ

ಉಡುಪಿ: ಬಂಕಿಮಚಂದ್ರ ಚಟರ್ಜಿ ವಿರಚಿತ ವಂದೇಮಾತರಂ ಗೀತೆ ಮತ್ತೊಮ್ಮೆ ವಿಶ್ವದಾಖಲೆಯತ್ತ ಸಾಗುತ್ತಿದೆ.

ಮಲ್ಪೆಯ ಕಡಲ ತೀರದಲ್ಲಿ ಕಳೆದ ವರ್ಷ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಡಿದ ವಂದೇಮಾತರಂ ವಿಶ್ವ ದಾಖಲೆಗೆ ಪಾತ್ರವಾಗಿತ್ತು. ಜಗತ್ತಿನಲ್ಲಿ ಒಂದೇ ಸಾಹಿತ್ಯ (ವಂದೇ ಮಾತರಂ) ಹಲವು ರಾಗ, ಸಂಗೀತದೊಂದಿಗೆ ಪ್ರಸ್ತುತಗೊಳ್ಳಲಿರುವುದು ಮೊದಲ ಪ್ರಯತ್ನ.

ಇಂಥದ್ದೊಂದು ಮಹತ್ವದ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ 156ನೇ ಜನ್ಮದಿನದ ಪ್ರಯುಕ್ತ ಉಡುಪಿಯ ಸಂವೇದನಾ ಫೌಂಡೇಷನ್ ಪ್ರಸ್ತುತಪಡಿಸುತ್ತಿದೆ. ಜ.12ರಂದು ಮಲ್ಪೆ ಕಡಲತೀರದಲ್ಲಿ ದೇಶದ 29 ರಾಜ್ಯಗಳ ತಂಡದ 150ರಿಂದ 200 ಹಿನ್ನೆಲೆ ಗಾಯಕರು, 15 ಸಾವಿರ ಸ್ಪರ್ಧಿಗಳು ಸೇರಿ ಒಟ್ಟು 50 ಸಾವಿರ ಪ್ರತಿನಿಧಿಗಳು, ಚಲನಚಿತ್ರ, ಸುಗಮ ಸಂಗೀತ ಕ್ಷೇತ್ರದ ಗಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಶ್ವದಾಖಲೆ ಹೇಗೆ?

ಕಾಶ್ಮಿರದಿಂದ, ಕನ್ಯಾಕುಮಾರಿವರೆಗಿನ ದೇಶದ 29 ರಾಜ್ಯಗಳ ವೃತ್ತಿನಿರತ ಗಾಯಕ, ಗಾಯಕಿಯರು ವಂದೇಮಾತರಂ ಸಾಹಿತ್ಯಕ್ಕೆ ವಿಭಿನ್ನ ರಾಗ ಸಂಯೋಜನೆ ಮಾಡಲಿದ್ದಾರೆ. ತಮ್ಮ ರಾಜ್ಯದ ಪ್ರಕೃತಿ, ಸಂಸ್ಕೃತಿ ಬಿಂಬಿಸುವ ದೃಶ್ಯವನ್ನು ಅಳವಡಿಸಲಿದ್ದಾರೆ. ಈ ಆಲ್ಬಂ ಯೂಟ್ಯೂಬ್ ಚಾನೆಲ್ ಮೂಲಕ ಅಪ್​ಲೋಡ್ ಆಗುತ್ತವೆ. ಈ ಮೂಲಕ ವಂದೇ ಮಾತರಂ ಸಾಹಿತ್ಯ ಹಲವು ರಾಗ, ಸಂಗೀತ, ದೃಶ್ಯ ಸಂಯೋಜನೆಯೊಂದಿಗೆ ದೇಶಾದ್ಯಂತ ಮೊಳಗುತ್ತದೆ. ಜಗತ್ತಿನಲ್ಲಿ ಬೇರಾವ ಸಾಹಿತ್ಯವೂ ಇಷ್ಟೊಂದು ಪ್ರಮಾಣದಲ್ಲಿ ರಾಗ, ಸಂಗೀತ ಬದಲಾವಣೆ ಆಗಿರುವ ಇತಿಹಾಸವಿಲ್ಲ. ಹೀಗೆ ಪ್ರಸ್ತುತಗೊಂಡರೆ ವಂದೇಮಾತರಂ ಹೊಸ ದಾಖಲೆಗೆ ಸೇರ್ಪಡೆಗೊಳ್ಳುತ್ತದೆ ಎಂದು ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಮಲ್ಪೆ ಹೇಳುತ್ತಾರೆ.

100 ಉತ್ಕೃಷ್ಟ ಪ್ರಸ್ತುತಿಗಳ ಆಯ್ಕೆ

ಖ್ಯಾತ ನಿರ್ದೇಶಕರು, ಸಂಗೀತ ನಿರ್ದೇಶಕರು, ತಾಂತ್ರಿಕ ತಜ್ಞರ ತೀರ್ಪಗಾರರ ತಂಡ 29 ರಾಜ್ಯಗಳ 100 ಉತ್ಕೃಷ್ಟ ಗೀತೆಗಳನ್ನು ಆಯ್ಕೆ ಮಾಡುತ್ತದೆ. ಮಲ್ಪೆಯಲ್ಲಿ ಜ.12ರಂದು ನಡೆಯುವ ಕಾರ್ಯಕ್ರಮದಲ್ಲಿ ಉತ್ತಮ 10 ಗೀತೆಗಳು ಆಯ್ಕೆಯಾಗುತ್ತವೆ. ಇದರಲ್ಲಿ ಉತ್ಕೃಷ್ಟ ಮೊದಲ ಪ್ರಸ್ತುತಿಗೆ 2 ಲಕ್ಷ ರೂ. ಬಹುಮಾನ, ದ್ವಿತೀಯ 1 ಲಕ್ಷ ರೂ. ಬಹುಮಾನವಿದೆ.

ದೇಶಾದ್ಯಂತ ಸಂಪರ್ಕ ಹೇಗೆ?

ಸಂವೇದನಾ ಫೌಂಡೇಷನ್ ಒಂದು ತಿಂಗಳಿನಿಂದ ತಯಾರಿ ನಡೆಸುತ್ತಿದೆ. ಮಣಿಪಾಲ ಸೇರಿ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿನ ಹೊರರಾಜ್ಯಗಳ ವಿದ್ಯಾರ್ಥಿಗಳ ಮೂಲಕ ಕಾರ್ಯಕ್ರಮ ಪ್ರಚಾರವನ್ನು 29 ರಾಜ್ಯಗಳಿಗೆ ಮುಟ್ಟಿಸಲಾಗುತ್ತಿದೆ. ಹೊರರಾಜ್ಯಗಳ ವಿಶ್ವವಿದ್ಯಾಲಯ, ಸಂಘ-ಸಂಸ್ಥೆಗಳಿಗೆ ದೂರವಾಣಿ, ಇ-ಮೇಲ್, ಜಾಲತಾಣದ ಮೂಲಕ ಸಂಪರ್ಕ ಸಾಧಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ, ನೋಂದಣಿಗೆ http://samvedana foundationudupi.org ವೆಬ್​ಸೈಟ್ ವೀಕ್ಷಿಸಿ.

ಮಲ್ಪೆಯಲ್ಲಿ ಇತಿಹಾಸ ಬರೆದ ವಂದೇಮಾತರಂ

ಕಳೆದ ವರ್ಷ ಮಲ್ಪೆ ಕಡಲತೀರದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ 2 ಸಾವಿರ ವಿದ್ಯಾರ್ಥಿಗಳು, 20ಕ್ಕೂ ಹೆಚ್ಚು ಹಿನ್ನೆಲೆ ಗಾಯಕರ ಧ್ವನಿಯಲ್ಲಿ ವಂದೇಮಾತರಂ ಗೀತೆ ಇತಿಹಾಸ ಸೃಷ್ಟಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ಗೆ ಸೇರ್ಪಡೆಗೊಂಡಿತ್ತು.

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...