ವಿಶ್ವಕ್ಕೆ ನಾಗರಿಕ ಸಂಸ್ಕೃತಿ ಕಲಿಸಿಕೊಟ್ಟ ವಾಲ್ಮೀಕಿ

ಇಳಕಲ್ಲ(ಗ್ರಾ): ವಾಲ್ಮೀಕಿ ಮಹರ್ಷಿಗಳು ಸಹಸ್ರಾರು ವರ್ಷಗಳ ಹಿಂದೆಯೇ ನಾಗರಿಕ ಸಂಸ್ಕೃತಿ ಕಲಿಸಿಕೊಟ್ಟ ಶ್ರೇಷ್ಠ ಮುನಿ. ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಕಂದಗಲ್ಲದಲ್ಲಿ ಮಹರ್ಷಿ ವಾಲ್ಮೀಕಿ ಜಯಂತುತ್ಸವ ಸಮಿತಿಯವರು ಹಮ್ಮಿಕೊಂಡ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಚೆನ್ನಿ, ಸಾನ್ನಿಧ್ಯ ವಹಿಸಿದ್ದ ನಂದವಾಡಗಿ ಮಹಾಂತೇಶ್ವರ ಮಠದ ಉತ್ತರಾಧಿಕಾರಿ ಚನ್ನವಬಸವದೇವರು ಮಾತನಾಡಿದರು. ಕಂದಗಲ್ಲ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು.ಇಳಕಲ್ಲ ತಾಲೂಕು ವಾಲ್ಮೀಕಿ ಜನಾಂಗದ ಮುಖಂಡ ದುರಗೇಶ ಸುರಪುರ ಅವರು ವಾಲ್ಮೀಕಿ ಭಾವಚಿತ್ರ ಅನಾವರಣಗೊಳಿಸಿದರು.

ಮಹಾಂತಗೌಡ ಪಾಟೀಲ, ಸಿ.ಎಸ್. ಪಾಟೀಲ, ಬಸೆಟ್ಟೆಪ್ಪ ಸಜ್ಜನ, ಶಿವನಗೌಡ ಅಗಸಿಮುಂದಿನ, ಮಲ್ಲಯ್ಯ ಮೂಗನೂರಮಠ, ಚಂದ್ರಶೇಖರ ಕಂಠಿ, ಪರತಗೌಡ ಪಾಟೀಲ, ವಿಶ್ವನಾಥ ರೆಡ್ಡಿ, ಶಂಕ್ರಪ್ಪ ವಾಲಿಕಾರ, ಲಕ್ಷ್ಮಣ ಚಂದ್ರಗಿರಿ, ಶರಣಯ್ಯ ಮಠ, ರುದ್ರಗೌಡ, ಶ್ರೀನಿವಾಸ ಕುಲಕರ್ಣಿ, ಪ್ರಕಾಶ ಪೋಚಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಪಿಕೆಪಿಎಸ್ ಅಧ್ಯಕ್ಷ ಪಂಪಣ್ಣ ಸಜ್ಜನ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗುಡಿಹಾಳ ನಿರೂಪಿಸಿದರು. ಬಸವರಾಜ ಕಾರಟಗಿ ಸ್ವಾಗತಿಸಿದರು.