ಮಹಾನ್ ಪುರುಷರ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಿ

ಚಿಕ್ಕಮಗಳೂರು: ಯುವಕರು ದೇಶ, ನಾಡು ನುಡಿಗಾಗಿ ಹೋರಾಡಿದ ನಾಯಕರ ವಿಚಾರಧಾರೆಗಗಳು, ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು ಎಂದು ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಕೋಟೆ ಜಗದೀಶ್ ತಿಳಿಸಿದರು.

ದೋಣಿಖಣದ ಹೊಸ ಬಡಾವಣೆ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕಚೆೇರಿಯಲ್ಲಿ ಏರ್ಪಡಿಸಿದ್ದ ವೀರ ಮದಕರಿ ಜಯಂತಿ ಕಾರ್ಯಕ್ರಮದಲ್ಲಿ ಮದಕರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ನಾಡು ನುಡಿಗಾಗಿ ಹೋರಾಟ ಮಾಡಿದ ಧಿಮಂತ ವ್ಯಕ್ತಿ ವೀರ ಮದಕರಿ ಎಂದರು.

ಮಹಾತ್ಮರ ಜಯಂತ್ಯುತ್ಸವಗಳು ಒಂದು ಜಾತಿಗೆ ಸೀಮಿತವಾಗದೆ ಎಲ್ಲ ವರ್ಗದವರು ಆಚರಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರವೇ ವೀರ ಮದಕರಿ ಜಯಂತಿ ಕಾರ್ಯಕ್ರಮ ಆಚರಣೆ ಮಾಡಲು ಮುಂದಾಗಬೇಕು. ವೀರ ಮದಕರಿ ವಿಷಯಗಳನ್ನು ಯುವ ಪೀಳಿಗೆಗೆ ತಿಳಿಯುವ ಹಾಗೆ ವಿಶೇಷ ಉಪನ್ಯಾಸ ನೀಡಬೇಕು ಎಂದರು.

ಮದಕರಿ ನಾಯಕ 16ನೇ ವಯಸ್ಸಿನಲ್ಲಿ ಪಟ್ಟಕ್ಕೆ ಏರಿ ಚಿತ್ರದುರ್ಗ ಕೋಟೆ ಸದೃಢಗೊಳಿಸಿದರು. ಮದಕರಿ ಮುಂಚೆ ಕಸ್ತೂರಿ ರಂಗಪ್ಪನಾಗಿದ್ದ. ಮದವೇರಿದ ಆನೆ ಪಳಗಿಸಿ ಅನಾಹುತ ತಪ್ಪಿಸಿದ್ದರಿಂದ ಮೈಸೂರು ರಾಜರು ಮದಕರಿ ಎಂದು ನಾಮಕರಣ ಮಾಡಿದ್ದರು .ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಹೈದರಾಲಿ ಸೇನೆ ನುಸುಳುವುದನ್ನು ಕಂಡು ವೀರಾವೇಶದಿಂದ ಹೋರಾಡಿದ ಒನಕೆ ಓಬವ್ವನ ನೆನಪಿನಾರ್ಥ ಮದಕರಿ ನಾಯಕರೆ ಓಬವ್ವನ ಕಿಂಡಿ ಎಂದು ಹೆಸರಿಟ್ಟಿದ್ದರು ಎಂದರು.