ಅಳವಂಡಿ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವುದರಿಮದ ಒಗ್ಗಟ್ಟಿನ ಭಾವನೆ ಮೂಡಲಿದೆ ಎಂದು ರಾಜೇನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ೆ. 8-9 ರಂದು ರಾಜೇನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ ಅಂಗವಾಗಿ ಗ್ರಾಮದ ಸಮುದಾಯ ಭವನದಲ್ಲಿ
ಕರಪತ್ರ ಬಿಡುಗಡೆ ಹಾಗೂ ಮುಖಂಡರಿಗೆ ಅಹ್ವಾನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಮಾಜದಲ್ಲಿ ಎಲ್ಲರೂ ಸುಖ-ಶಾಂತಿ, ಸಮೃದ್ಧಿಯಿಂದ ಬದುಕು ಸಾಗಿಸಬೇಕಾದರೆ ಮಹಾತ್ಮರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು.
ವಾಲ್ಮೀಕಿಯ ಜ್ಞಾನ ಮತ್ತು ಬೋಧನೆಗಳು ಸರ್ವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತವೆ ಎಂದರು. ಪ್ರಮುಖರಾದ ಶಿವಮೂರ್ತಿ, ಹನುಮಗೌಡ್ರ, ಕೆಂಪನಗೌಡ್ರ, ಕೆಂಚಪ್ಪ, ಹೊನ್ನಪ್ಪಗೌಡ, ಜಗದೀಶ ತಳವಾರ, ಹನುಮಂತ ಜಾಣಗಾರ, ಮಾರುತಿ, ನಿಂಗಪ್ಪ ಬೋಚನಹಳ್ಳಿ, ಸುರೇಶ ಪೂಜಾರ, ಶಂಕ್ರಮ್ಮ ಜೋಗಿನ ಇತರರಿದ್ದರು.