ಅಟಲ್‌ ಬಿಹಾರಿ ವಾಜಪೇಯಿ ಆರೋಗ್ಯದಲ್ಲಿ ಚೇತರಿಕೆ: ಏಮ್ಸ್‌

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಏಮ್ಸ್​ ಆಸ್ಪತ್ರೆ ಬುಧವಾರ ತಿಳಿಸಿದೆ.

ವಾಜಪೇಯಿ ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಅವರ ಆರೋಗ್ಯವು ಕಳೆದ 48 ಗಂಟೆಗಳಲ್ಲಿ ಗಮನಾರ್ಹ ಚೇತರಿಕೆ ಕಾಣುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರ ಕಿಡ್ನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೂತ್ರದ ಉತ್ಪತ್ತಿಯೊಂದಿಗೆ ಸುಧಾರಿಸಿದೆ. ರಕ್ತದೊತ್ತಡ, ಹೃದಯದ ಬಡಿತ ಮತ್ತು ಉಸಿರಾಟ ಕೂಡ ಸ್ಥಿರವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅವರು ಸಂಪೂರ್ಣ ಚೇತರಿಕೆ ಕಾಣುವ ಭರವಸೆಯಿದೆ ಎಂದು ತಿಳಿಸಿದ್ದಾರೆ.

ಉಸಿರಾಟದ ಸಮಸ್ಯೆ, ಮೂತ್ರನಾಳದ ಸೋಂಕು ಹಾಗೂ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದ ವಾಜಪೇಯಿ ಅವರು ಜೂ.11ರಂದು ಏಮ್ಸ್‌ಗೆ ದಾಖಲಾಗಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *