ವಾದಿರಾಜರು ಯತಿಕುಲಕ್ಕೆ ಮುಕುಟಪ್ರಾಯ: ಪುತ್ತಿಗೆ ಶ್ರೀ

ಉಡುಪಿ: ಪಾಂಡಿತ್ಯ, ಸಮಾಜಸುಧಾರಣೆ, ಸಿದ್ಧಿಸಾಧನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿಪೂರ್ಣತೆ ಸಾಧಿಸಿದ ವಾದಿರಾಜರು ಯತಿಕುಲಕ್ಕೆ ಮುಕುಟಪ್ರಾಯರಾಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ರಾಜಾಂಗಣದಲ್ಲಿ ಪುತ್ತಿಗೆ ಮಠದ ಮೂಲಯತಿ ಉಪೇಂದ್ರ ತೀರ್ಥರ ಆರಾಧನೆ ಮತ್ತು ವಾದಿರಾಜ ತೀರ್ಥರ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಉಪೇಂದ್ರ ತೀರ್ಥರ ಆರಾಧನೆ ದಿನದಂದೇ ವಾದಿರಾಜರು ಅವತರಿಸಿದ್ದರಿಂದ ಅವರ ಸಾಹಸ ಸ್ವಭಾವದ ಉತ್ತರಾಧಿಕಾರಿ ಎಂಬುವುದು ನಮ್ಮ ಭಾವನೆ. ಅಷ್ಟಮಠಗಳ ಎಲ್ಲಾ … Continue reading ವಾದಿರಾಜರು ಯತಿಕುಲಕ್ಕೆ ಮುಕುಟಪ್ರಾಯ: ಪುತ್ತಿಗೆ ಶ್ರೀ