More

    ವಚನ ಸಾಹಿತ್ಯ ರಕ್ಷಣೆಗೆ ಚನ್ನಬಸವಣ್ಣ ಕೊಡುಗೆ ಅಪಾರ

    ಕಂಪ್ಲಿ: ವಚನ ಸಾಹಿತ್ಯದ ಕಟ್ಟುಗಳನ್ನು ಸುರಕ್ಷಿತವಾಗಿ ಮಠಗಳಿಗೆ ತಲುಪಿಸುವಲ್ಲಿ ಶಿವಶರಣ ಚನ್ನಬಸವಣ್ಣನವರ ಪಾತ್ರ ಮಹತ್ವದ್ದಾಗಿದೆ ಎಂದು ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನೀಲ್ ಹೇಳಿದರು.

    ಪಟ್ಟಣದ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ 154ನೇ ಮಹಾಮನೆ ಕಾರ್ತಕ್ರಮದಲ್ಲಿ ಮಾತನಾಡಿದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರು ವಚನ ಕಟ್ಟುಗಳನ್ನು ಸಂರಕ್ಷಿಸಲು ಜೀವನವನ್ನೇ ಪಣಕ್ಕಿಟ್ಟಿದ್ದರು. ಇಂತಹ ಶರಣರಿಗೆ ಚನ್ನಬಸವಣ್ಣ ಮುಂದಾಳತ್ವವಹಿಸಿ ವಚನ ಕಟ್ಟುಗಳನ್ನು ಸುರಕ್ಷಿತ ಸ್ಥಳಗಳಿಗೆ ಮುಟ್ಟಿಸುವ ಮೂಲಕ ವಚನ ಸಾಹಿತ್ಯದ ಉಳಿವು, ಪೋಷಣೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಸಿದ್ಧಾಂತಗಳನ್ನು ಪಾಲಿಸಬೇಕು ಎಂದರು.

    ಇದನ್ನೂ ಓದಿ: ವಚನ ಜಗತ್ತಿನ ಮೊದಲ ಸಾಹಿತ್ಯ

    ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ನಿಸ್ವಾರ್ಥ ಮತ್ತು ಪಕ್ಷಾತೀತ ಸೇವೆ ಸಲ್ಲಿಸುವ ನಿಸರ್ಗದಿಂದ ಮನುಷ್ಯ ಪಾಠ ಕಲಿಯಬೇಕಿದೆ. ಕಲುಷಿತ ಮನಸ್ಸಿನ ಪರಿಶುದ್ಧತೆಗೆ ವಚನ ಸಾಹಿತ್ಯ ಔಷಧವಾಗಿದೆ ಎಂದರು.

    ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಮಡಿವಾಳರ ಹುಲುಗಪ್ಪ, ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಧರ್ಮಕರ್ತ ಯು.ಎಂ.ವಿದ್ಯಾಶಂಕರ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಪ್ರಮುಖರಾದ ಎಸ್.ಡಿ.ಬಸವರಾಜ, ಅಂಬಿಗರ ಮಂಜುನಾಥ, ಅಶೋಕ ಕುಕನೂರು, ಕೆ.ಚಂದ್ರಶೇಖರ್, ಎಲಿಗಾರ ವೆಂಕಟರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts