“ಶಾಲೆಗಳು ತೆರೆಯಬೇಕೆಂದರೆ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಾಗಬೇಕು”

blank

ನವದೆಹಲಿ : ಮಕ್ಕಳಿಗೆ ಕರೊನಾ ಲಸಿಕೆ ಲಭ್ಯಗೊಳಿಸುವುದು ಪ್ರಮುಖ ಮೈಲಿಗಲ್ಲಾಗಿದ್ದು, ಅದು ಶಾಲೆಗಳನ್ನು ಪುನಃ ತೆರೆಯುವುದಕ್ಕೆ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಿದೆ ಎಂದು ಏಮ್ಸ್​ ಮುಖ್ಯಸ್ಥ ಡಾ. ರಣದೀಪ್​ ಗುಲೇರಿಯ ಹೇಳಿದ್ದಾರೆ.

ಎರಡರಿಂದ 18 ವರ್ಷ ವಯೋಮಾನದವರ ಮೇಲಿನ ಭಾರತ್​ ಬಯೋಟೆಕ್​ನ ಕೋವಾಕ್ಸಿನ್​ ಲಸಿಕೆಯ ಪ್ರಯೋಗಗಳ ಡೇಟಾ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ. ಡೇಟಾ ಆಧರಿಸಿ, ಡ್ರಗ್​ ನಿಯಂತ್ರಕರ ಅನುಮೋದನೆ ಸಿಕ್ಕರೆ, ಭಾರತದಲ್ಲಿ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಾಗಲಿದೆ ಎಂದರು.

ಇದನ್ನೂ ಓದಿ: ಪೊಲೀಸ್​ ಇಲಾಖೆ ವೆಬ್​ಸೈಟ್​ಗೆ ಹೊಸ ರೂಪ! ಅಪೂರ್ಣ ಕೆಎಸ್​ಪಿ ಜಾಲತಾಣಕ್ಕೆ ಗುಡ್​ಬೈ

ಅದಕ್ಕಿಂತ ಮುಂಚೆ ಫೈಜರ್​ ಲಸಿಕೆಗೆ ಅನುಮೋದನೆ ಸಿಕ್ಕರೆ, ಅದು ಕೂಡ ಮಕ್ಕಳಿಗೆ ಲಭ್ಯವಾಗುವ ಆಯ್ಕೆಯಾಗುತ್ತದೆ. ಇನ್ನು, ಜೈಡಸ್​ ಕಾಡಿಲದವರು ತಮ್ಮ ಜೈಕೋವಿ-ಡಿ ಲಸಿಕೆಯನ್ನು ವಯಸ್ಕರಿಗೆ ಮತ್ತು ಮಕ್ಕಳಿಗೆ ನೀಡಬಹುದೆಂದು ತುರ್ತು ಬಳಕೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅದೂ ಒಂದು ಆಯ್ಕೆಯಾಗಬಹುದು ಎಂದಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ಶಿಕ್ಷಣದ ದೃಷ್ಟಿಯಿಂದ ಮಕ್ಕಳಿಗೆ ಭಾರೀ ನಷ್ಟವಾಗುತ್ತಿದ್ದು, ಶಾಲೆಗಳನ್ನು ಮತ್ತೆ ತೆರೆಯಬೇಕಾಗಿದೆ. ಇದರಲ್ಲಿ ಲಸಿಕಾಕರಣ ಮಹತ್ವದ ಪಾತ್ರ ವಹಿಸಲಿದೆ ಎಂದ ಡಾ. ಗುಲೇರಿಯ, ಮಕ್ಕಳಲ್ಲಿ ಬಹುತೇಕವಾಗಿ ಮೆದುಪ್ರಮಾಣದ ಸೋಂಕು ಕಾಣಿಸಿಕೊಳ್ಳುತ್ತದೆ. ಹಲವು ಬಾರಿ ಏಸಿಮ್ಟಮಾಟಿಕ್ ಆಗಿರುತ್ತದೆ ಮತ್ತು ಅವರು ವೈರಸ್​ನ ವಾಹಕರಾಗುತ್ತಾರೆ ಎಂದಿದ್ದಾರೆ. (ಏಜೆನ್ಸೀಸ್)

‘ಭಾರತದ ಎಲ್ಲ ವಯಸ್ಕರಿಗೆ ಲಸಿಕೆ ನೀಡಲು ಬೇಕು, 188 ಕೋಟಿ ಡೋಸ್​’

ಸ್ವಗ್ರಾಮ ಪರೌಂಖ್​ಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಭೇಟಿ

 

 

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…