More

  ಮತ್ತೊಮ್ಮೆ ‘ರೇಡ್​’ಗೆ ರೆಡಿಯಾದ ಅಜಯ್​ ; ಇಲಿಯಾನಾ ಜಾಗಕ್ಕೆ ಬಂದರು ವಾಣಿ ಕಪೂರ್​!

  ಅಜಯ್ ದೇವ್ಗನ್, ಇಲಿಯಾನಾ ಡಿಕ್ರೂಜ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸಿನಿಮಾ ‘ರೇಡ್’. 2018ರಲ್ಲಿ ರಿಲೀಸ್ ಆಗಿದ್ದ ಈ ಕ್ರೈಮ್ ಡ್ರಾಮಾ ಆ ವರ್ಷದ ಹಿಟ್ ಸಿನಿಮಾಗಳ ಪಟ್ಟಿ ಸೇರಿತ್ತು. ಇದೀಗ ಆರು ವರ್ಷಗಳ ಬಳಿಕ ನಿರ್ದೇಶಕ ರಾಜಕುಮಾರ್ ಗುಪ್ತಾ, ಸೀಕ್ವಲ್‌ನೊಂದಿಗೆ ವಾಪಸ್ಸಾಗಿದ್ದಾರೆ. ಇತ್ತೀಚೆಗಷ್ಟೆ ‘ರೇಡ್ 2’ ಮುಂಬೈನಲ್ಲಿ ಸೆಟ್ಟೇರಿದ್ದು ತೆಲುಗು ನಟ ರವಿತೇಜ ಮುಹೂರ್ತದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

  ಇದನ್ನೂ ಓದಿ : MERRY CHRISTMAS : ‘ರಾತ್ ಅಕೇಲಿ ಥಿ…’ ಹಾಡಿನಲ್ಲಿ ಕತ್ರಿನಾ ಕೈಫ್-ವಿಜಯ್ ಸೇತುಪತಿ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ!

  ಮತ್ತೊಮ್ಮೆ 'ರೇಡ್​'ಗೆ ರೆಡಿಯಾದ ಅಜಯ್​ ; ಇಲಿಯಾನಾ ಜಾಗಕ್ಕೆ ಬಂದರು ವಾಣಿ ಕಪೂರ್​!

  ಮೊದಲ ಚಿತ್ರದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಅಮಯ್ ಪಟ್ನಾಯಕ್ ಪಾತ್ರದಲ್ಲಿ ನಟಿಸಿದ್ದ ಅಜಯ್ ದೇವ್ಗನ್, ಇಲ್ಲೂ ಅದೇ ಪಾತ್ರದಲ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ. ಆದರೆ ನಾಯಕಿಯ ಪಾತ್ರಕ್ಕೆ ಇಲಿಯಾನಾ ಜಾಗಕ್ಕೆ ನಟಿ ವಾಣಿ ಕಪೂರ್ ಆಗಮಿಸಿದ್ದಾರೆ. 2022ರಲ್ಲಿ ಬಿಡುಗಡೆಯಾದ ‘ಶಮ್ಶೇರಾ’ ಬಳಿಕ ವಾಣಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.

  ಇದನ್ನೂ ಓದಿ : ಶ್ರೀರಾಮ ವನವಾಸದಲ್ಲಿ ಮಾಂಸ ಸೇವಿಸಿದ್ದ; ಒಟಿಟಿ ಫ್ಲಾಟ್​ಫಾರ್ಮ್​ ಬಹಿಷ್ಕರಿಸುವಂತೆ ಆಗ್ರಹ

  ಮತ್ತೊಮ್ಮೆ 'ರೇಡ್​'ಗೆ ರೆಡಿಯಾದ ಅಜಯ್​ ; ಇಲಿಯಾನಾ ಜಾಗಕ್ಕೆ ಬಂದರು ವಾಣಿ ಕಪೂರ್​!

  ಇದೀಗ ‘ರೇಡ್ 2’ ಜತೆ ‘ಖೇಲ್ ಖೇಲ್ ಮೇ’ ಸಿನಿಮಾ ಹಾಗೂ ‘ಮಂಡಲ ಮರ್ಡರ್ಸ್’ ಎಂಬ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಿರುವ ಅಜಯ್ ‘ಸಿಂಘಂ ಅಗೇನ್’, ‘ಶೈತಾನ್’, ‘ಮೈದಾನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ‘ರೇಡ್ 2’ ಇದೇ ನ. 15ರಂದು ತೆರೆಗೆ ಬರಲಿದೆ ಎನ್ನಲಾಗಿದೆ.

  ಮತ್ತೊಮ್ಮೆ 'ರೇಡ್​'ಗೆ ರೆಡಿಯಾದ ಅಜಯ್​ ; ಇಲಿಯಾನಾ ಜಾಗಕ್ಕೆ ಬಂದರು ವಾಣಿ ಕಪೂರ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts