ವಿ.ಮಹೇಶ್ವರಪ್ಪಗೆ ಪಿಎಚ್.ಡಿ ಪದವಿ

ಗೋಣಿಕೊಪ್ಪ: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ವಿ.ಮಹೇಶ್ವರಪ್ಪ ಅವರು ಅರಣ್ಯ ಜೀವಶಾಸ್ತ್ರ ಮತ್ತು ವೃಕ್ಷ ಅಭಿವೃದ್ಧಿ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಕಾಫಿ ಬೆಳೆ ಮೂಲಕ ವಿನಾಶದಂಚಿನಲ್ಲಿರುವ ಮರಗಳ ಪೋಷಣೆ ಕುರಿತ ಮಹಾಪ್ರಬಂಧಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.

ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಹೆಚ್ಚಿನ ವ್ಯಾಸಂಗ ಕೈಗೊಂಡಿದ್ದ ಅವರಿಗೆ ಅರಣ್ಯ ಜೀವಶಾಸ್ತ್ರದಲ್ಲಿ ಡಾ.ಆರ್.ವಾಸುದೇವ ಮಾರ್ಗದರ್ಶಕರಾಗಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗ್ಡೆ ಉಪ ಮಾರ್ಗದರ್ಶಕರಾಗಿದ್ದರು.

Leave a Reply

Your email address will not be published. Required fields are marked *