ಡಾ.ಸವಿತಾ ಬೋಳಶೆಟ್ಟಿ ನೇತೃತ್ವದಲ್ಲಿ ವಿಜಯಪುರ ಅಕ್ಕ ವಿವಿ ಯುವಜನೋತ್ಸವದಲ್ಲಿ ವಿದ್ಯಾರ್ಥಿನಿಯರ ಉತ್ತಮ ಪ್ರದರ್ಶನ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ೪೫ ವಿದ್ಯಾರ್ಥಿನಿಯರು ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಯುವಜನೋತ್ಸವ ೧೯ನೇ ಶಕ್ತಿ ಸಂಭ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಸಾಧನೆ ಮೆರೆದಿದ್ದಾರೆ.
ಏಕಾಂತ ನಾಟಕ ಪ್ರಥಮ, ಸ್ಟಿಕ್ ದ್ವಿತೀಯ, ಜಾನಪದ ಸಂಗೀತ (ದ್ವಿ), ಕ್ಲಾಸಿಕಲ್ ನೃತ್ಯ (ದ್ವಿ), ಪ್ರೊಸೇಷನ್ (ದ್ವಿ), ವೆಸ್ಟರ್ನ್ ವೋಕಲ್ ಸೋಲೋ (ತೃ), ಸ್ಫಾಟ್ ಫೋಟೋಗ್ರಫಿಯಲ್ಲಿ ತೃತೀಯ ಸ್ಥಾನ ಪಡೆದಿದ್ದು, ಥೇಟರ್ ಸ್ಪರ್ಧೆಗಳಲ್ಲಿ ರನ್ನರ್ ಅಪ್ ಟ್ರೋಫಿ ಪಡೆದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಟೀಮ್ ಮ್ಯಾನೇಜರ್ ಡಾ.ಸವಿತಾ ಬೋಳಶೆಟ್ಟಿ, ದಾನಮ್ಮ ಬಿರಾದಾರ ಸೇರಿ ಕಾಲೇಜಿನ ಎಲ್ಲ ಉಪನ್ಯಾಸಕರು ನಿರ್ವಹಣೆ, ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಹೈದರಾಬಾದ್ ಕರ್ನಾಟಕ ಶಿP್ಷÀಣ ಸಂಸ್ಥೆ ಅಧ್ಯಕ್ಷ ಶಶಿಲ್ ನಮೋಶಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡ ಅಭಿನಂದಿಸಿದ್ದಾರೆ.
ಡಾ.ಸವಿತಾ ಬೋಳಶೆಟ್ಟಿ ಅವರ ಪ್ರೋತ್ಸಾಹವೇ ಸಾಧನೆಗೆ ಕಾರಣ ಎಂದು ವಿದ್ಯಾರ್ಥಿನಿಯರ ಹರ್ಷ
ಡಾ.ಸವಿತಾ ಬೋಳಶೆಟ್ಟಿ ನೇತೃತ್ವದಲ್ಲಿ ವಿಜಯಪುರಕ್ಕೆ ತೆರಳಿದ ವಿದ್ಯಾರ್ಥಿನಿಯರ ತಂಡ ಮಾದರಿಯಾಗಿ ವಿವಿಧ ಸ್ಪರ್ಧೆಗಳಲ್ಲಿ ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ. ಈ ಸಲದ ಅಕ್ಕ ವಿಶ್ವವಿದ್ಯಾಲಯದ ಯುವ ಜನೋತ್ಸವದಲ್ಲಿ ನಾವೆಲ್ಲರು ಪಾಲ್ಗೊಂಡು ಹೆಚ್ಚಿನ ವಿಭಾಗಳಲ್ಲಿ ವಿಜೇತರಾಗಿ ಬಹುಮಾನಗಳನ್ನು ಬಾಚಿಕೊಂಡು ಬರಲು ತಂಡದ ಮ್ಯಾನೇಜರ್ ಆಗಿರುವ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಸುನೀತಾ ಬೋಳಶೆಟ್ಟಿ ಮೇಡಂ ಅವರ ಪ್ರೋತ್ಸಾಹ ಅಪಾರವಾಗಿದೆ. ಅವರ ಸಲಹೆ ಮಾರ್ಗದರ್ಶನದಿಂದಲೇ ಸಾಧನೆ ಮಾಡಿದ್ದ ಎಂದು ವಿದ್ಯಾರ್ಥಿನಿಯರು ಖುಷಿಯಿಂದ ಹೇಳಿಕೊಂಡರು.
ಅಧ್ಯಕ್ಷರು ಪ್ರಾಚಾರ್ಯರ ಮಾರ್ಗದರ್ಶನ, ಸಹಕಾರದಿಂದ ಸಾಧನೆ ಸಾಧ್ಯ
ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡ ಅವರ ಮಾರ್ಗದರ್ಶನ, ಎಚ್‌ಕೆಇ ಅಧ್ಯಕ್ಷ ಶಶೀಲ ನಮೋಶಿ ಸೇರಿ ಎಲ್ಲರ ಸಹಕಾರದಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ದೊರಕಿ, ಸಾಧನೆ ಸಾಧ್ಯವಾಗಿದೆ. ವಿಜೇತರೆಲ್ಲರಿಗೂ ಅಭಿನಂದನೆಗಳು.
| ಡಾ.ಸವಿತಾ ಬೋಳಶೆಟ್ಟಿ
ಟೀಮ್ ಮ್ಯಾನೇಜರ್ ಹಾಗೂ ಮುಖ್ಯಸ್ಥರು ಇಂಗ್ಲೀಷ್ ವಿಭಾಗ
ವಿಜಿ ಮಹಿಳಾ ಪದವಿ ಕಾಲೇಜು ಕಲಬುರಗಿ