More

  ಉತ್ತರಾಖಂಡ ಟ್ರೆಕ್ಕಿಂಗ್​ ದುರಂತ: ಮೃತ ಚಾರಣಿಗರ ಕಳೇಬರ ಬಂಧುಗಳಿಗೆ‌ ಹಸ್ತಾಂತರ

  ಬೆಂಗಳೂರು: ಸತತ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಮೃತ ಒಂಬತ್ತು ಚಾರಣಿಗರ ಮೃತದೇಹಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿವೆ.

  ಉತ್ತರಾಖಂಡದ ಸಹಸ್ತ್ರತಾಲ್‌ನಲ್ಲಿ ಚಾರಣ ಮಾಡುವಾಗ ದುರಾದೃಷ್ಟವಶಾತ್ ಹವಾಮಾನ ವೈಪರೀತ್ಯಕ್ಕೆ ಬಲಿಯಾದ ಈ ಚಾರಣಿಗರಿಗೆ ಪಾರ್ಥಿವ ಶರೀರಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಗೌರವ ನಮನ ಸಲ್ಲಿಸಿದರು. ನಂತರ ಮೃತ ದೇಹಗಳನ್ನು ಸಂಬಂಧಿ ಬಂಧು ಮಿತ್ರರಿಗೆ ಹಸ್ತಾಂತರಿಸಲಾಯಿತು.

  13 ಚಾರಣಿಗರ ರಕ್ಷಣೆ
  ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸಿದ್ದ 22 ಚಾರಣಿಗರ ರಕ್ಷಣೆಗೆ ತುರ್ತು ಜಂಟಿ ಕಾರ್ಯಾಚರಣೆಯಾಯಿತು. ಒಟ್ಟು ಚಾರಣಿಗರಲ್ಲಿ 13 ಜನರನ್ನು ರಕ್ಷಿಸಿದರೆ, ಉಳಿದ ಒಂಭತ್ತು ಚಾರಣಿಗರು ಸ್ಥಳದಲ್ಲೇ ಅಸುನೀಗಿದ್ದರು. ಈ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ತೆರಳಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ ಜತೆಗೆ ಬದುಕುಳಿದ 13 ಚಾರಣಿಗರು ಡೆಹ್ರಾಡೂನ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿಯೇ ಮರಳಿದರು. ವಿಮಾನ ನಿಲ್ದಾಣದಲ್ಲಿ ಕಾದಿದ್ದ ಬಂಧು ಮಿತ್ರರು ಬರ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

  ರಾಜ್ಯ ಸರ್ಕಾರದ ತುರ್ತು ಸ್ಪಂದನೆ, ಕೃಷ್ಣಬೈರೇಗೌಡರ ಕಾಳಜಿಗೆ ಮರುಜನ್ಮ ಪಡೆದ ಚಾರಣಿಗರು, ಬಂಧುಗಳು, ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರು ಕೃತಜ್ಞತೆ‌ ಸಲ್ಲಿಸುವಾಗ ಭಾವಸದೃಶ, ಆನಂದಕ್ಕೆ ಪಾರವೇ ಇಲ್ಲದ ವಾತಾವರಣ ಸೃಷ್ಟಿಯಾಗಿತ್ತು.

  ರಾಜ್ಯ ಸರ್ಕಾರದಿಂದಲೇ ವೆಚ್ಚ ಭರ್ತಿ
  ಚಾರಣಿಗರ ರಕ್ಷಣಾ ಕಾರ್ಯಾಚರಣೆ, ಸ್ಥಳಾಂತರ, ಮರಳಿ ತಾಯ್ನಾಡಿಗೆ ಕರೆತಂದ, ಮೃತರ ಕಳೇಬರಗಳ ಸಾಗಣೆ, ಬಂಧುಗಳಿಗೆ ಹಸ್ತಾಂತರ, ಅಂಬುಲೆನ್ಸ್ ವ್ಯವಸ್ಥೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಪ್ರಕಾರ ಜಂಟಿ ಪ್ರಯತ್ನ, ರಕ್ಷಣಾ ಕಾರ್ಯಾಚರಣೆ ಸಾಧ್ಯವಾಯಿತು. ಉತ್ತರಾಖಂಡ ಸರ್ಕಾರ, ವಾಯು, ಭೂಸೇನೆ, ವಿಶೇಷ ಹೆಲಿಕಾಪ್ಟರ್ ಗಳು, ಸ್ಥಳೀಯರ‌ ನೆರವಿನಿಂದ 13 ಜನರ ಚಾರಣಿಗರನ್ನು ಪ್ರಾಣಾಪಾಯದಿಂದ ಪಾರುಗಾಣಿಸಲು ಸಾಧ್ಯವಾಯಿತು ಕೃಷ್ಣಬೈರೇಗೌಡ ವಿವರಿಸಿದರು.

  See also  ಕರ್ನಾಟಕದಲ್ಲಿ ಹೂಡಿಕೆಗೆ ಮುಂದಾದ ಅಮೆರಿಕ ಮೂಲದ ಲಾಕೀಡ್ ಮಾರ್ಟಿನ್ ಕಂಪನಿ: ಸಿಎಂ ಯಡಿಯೂರಪ್ಪಗೆ ಸಂಸ್ಥೆ ಪತ್ರ

  ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ರತಾಲ್ ಗೆ ಕರ್ನಾಟಕದಿಂದ 22 ಜನರ ತಂಡ ಚಾರಣಕ್ಕೆ ತೆರಳಿತ್ತು. ಈ ತಂಡವು ಮಾರ್ಗದರ್ಶಿಗಳ ನೆರವಿನೊಂದಿಗೆ ಗಮ್ಯ ಸ್ಥಳ ತಲುಪಿ, ಮಧ್ಯಾಹ್ನ ಹಿಂತಿರುಗುತ್ತಿದ್ದರು. ಮೂಲ ಕ್ಯಾಂಪ್ ಗೆ ಮರಳಲು ಇನ್ನೂ ಒಂದೂವರೆ ತಾಸು ಇರುವಾಗ ದಿಢೀರ್ ಪ್ರತಿಕೂಲ ವಾತಾವರಣ ಸೃಷ್ಟಿಯಾಯಿತು.

  ತೀವ್ರ ಹಿಮಪಾತ, ನಂತರ ಹಿಮಗಾಳಿ ಬೀಸಲಾರಂಭಿಸಿದರೆ, ದಟ್ಟ ಮಂಜು ಕವಿದು ಮುಂದಿನ ದಾರಿ ಗೋಚರಿಸದಂತಾಯಿತು. ಚಾರಣಿಗರೆಲ್ಲ ಮುಂದೆ ಸಾಗಲಾಗದೇ ಇಡೀ ರಾತ್ರಿ ಅಲ್ಲಿಯೇ ಕಳೆದರು. ಜೂ.3ರ ಮಧ್ಯಾಹ್ನ ಅವಘಡ ಸಂಭವಿಸಿದೆ. ಮರು ದಿನ ಚಾರಣಿಗರು ಮೊಬೈಲ್ ಸಿಗ್ನಲ್ ಗೆ ತಡಕಾಡಿ ಮಧ್ಯಾಹ್ನದ ವೇಳೆ ಮೂಲ ಶಿಬಿರ, ಅಲ್ಲಿಂದ ಉತ್ತರಕಾಶಿ ಜಿಲ್ಲಾ ಆಡಳಿತಕ್ಕೆ ಮಾಹಿತಿ ಲಭಿಸಿದ್ದು, ಕರ್ನಾಟಕ ಸರ್ಕಾರಕ್ಕೆ ಈ ವಿಷಯ ಜೂ.4ರ ರಾತ್ರಿ ಗೊತ್ತಾಯಿತು.

  ಕೂಡಲೇ ವಿಪತ್ತು ಸ್ಪಂದನ ಪಡೆ, ಸಚಿವ ಕೃಷ್ಣಬೈರೇಗೌಡ ಕಾರ್ಯತತ್ಪರವಾದರು. ಸಿಎಂ ಸೂಚನೆಯಂತೆ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರದ ನೆರವು ಯಾಚಿಸಿದರು. ಎಲ್ಲವೂ ಮಿಂಚಿನ ವೇಗದಲ್ಲಿ ಸಿದ್ಧವಾಗಿ ಜೂ.5ರ ಬೆಳಗ್ಗೆಯಿಂದ ಕಾರ್ಯಾಚರಣೆ‌ ಎರಡು ದಿನ ನಡೆಯಿತು. ಮೊದಲಿಗೆ ಬದುಕುಳಿದವರ ರಕ್ಷಿಸಿ ಡೆಹ್ರಾಡೂನ್ ಗೆ ಕಳುಹಿಸಿದರೆ, ನಂತರ ಮೃತರ ಶವಗಳನ್ನು ಹೊರ ತೆಗೆಯಲಾಯಿತು‌. ಕಾನೂನು ಪ್ರಕಾರ ಪ್ರಕ್ರಿಯೆ, ಶವ ಪೆಟ್ಟಿಗೆ ಲಭ್ಯತೆ, ವಿಮಾನಗಳಲ್ಲಿ ಕಾಯ್ದಿರಿಸುವಿಕೆ ಅನುಸಾರ ಶುಕ್ರವಾರ ನಸುಕು 5.30 ರಿಂದ ಐದು ವಿಮಾನಗಳಲ್ಲಿ ಬೆಳಗ್ಗೆ 9.30ರ ಎಲ್ಲ ಕಳೇಬರಗಳು ಬೆಂಗಳೂರಿಗೆ ತಲುಪಿದವು.

  ಎಲಾನ್​ ಮಸ್ಕ್​ನಿಂದಾಗಿ ಅಶ್ಲೀಲ ವಿಡಿಯೋಗಳಿಗೆ ದಾಸರಾದ ಬುಡಕಟ್ಟು ಯುವಕರು! ಮಹಿಳೆಯರ ಸ್ಥಿತಿ ಹೇಳತೀರದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts