ಸತ್ತಾಲ್: ರಾಬರ್ಟ್ ಶೂಟಿಂಗ್ ಅಂತ್ಯಗೊಂಡ ನಂತರ ರಿಲಾಕ್ಸ್ ಮೂಡ್ನಲ್ಲಿರುವ ನಟ ದರ್ಶನ್ ಕ್ಯಾಮೆರಾ ಹೆಗಲಿಗೇರಿಸಿಕೊಂಡು ವನ್ಯ ಜೀವಿ ಛಾಯಾಗ್ರಹಣಕ್ಕೆ ಉತ್ತರಾಖಂಡದ ಸತ್ತಾಲ್ಗೆ ತೆರಳಿದ್ದಾರೆ.
ದರ್ಶನ್ಗೆ ವನ್ಯಜೀವಿ ಛಾಯಾಗ್ರಹಣ ಅದರೆ ಅಚ್ಚುಮೆಚ್ಚು. ಸಿನಿಮಾಗಳ ಶೂಟಿಂಗ್ ಇಲ್ಲದಿದ್ದರೆ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಕಾಡಿನಲ್ಲಿ ಚಿತ್ರಗಳಿಗಾಗಿ ಅಲೆಯುತ್ತಾರೆ.
ಕಳೆದ ವರ್ಷ ದರ್ಶನ್ ಕೀನ್ಯಾದ ಸೆರೆಂಗೆಟ್ಟಿ ಕಾಡಿಗೆ ತೆರಳಿ ಅಲ್ಲಿ ವನ್ಯಜೀವಿಗಳ ಫೋಟೊ ತೆಗೆದಿದ್ದರು. ಅವುಗಳ ಪ್ರದರ್ಶನದಿಂದ ಬಂದ ಹಣವನ್ನು ಅರಣ್ಯ ವಾಸಿಗಳ ಕಲ್ಯಾಣಕ್ಕೆ ನೀಡಿದ್ದರು.
ತರುಣ್ ಸುಧೀರ್ ನಿರ್ದೇಶನದ ’ರಾಬರ್ಟ್’ ಚಿತ್ರದ ಶೂಟಿಂಗ್ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರು ಸತ್ತಾಲ್ಗೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ರಾಹುಲ್ ಶರ್ಮ, ಸತ್ತಾಲ್‌ನ ಇನ್ ಕ್ರೆಡಿಬಲ್ ಬರ್ಡಿಂಗ್ ಕ್ಯಾಂಪ್‌ನ ಶುಭಂ ಕುಮಾರ್ ಜತೆ ತೆರಳಿದ್ದಾರೆ. ಸ್ನೇಹಿತರಾದ ಕಿರಣ್ ಶ್ರೀನಿವಾಸ್ , ರಾಜೇಶ್ , ಮನು ಅಯ್ಯಪ್ಪ ಮತ್ತು ಸುನೀಲ್ ದರ್ಶನ್ ಗೆ ಸಾಥ್ ನೀಡಿದ್ದಾರೆ.
ಚಳಿಗಾಲದಲ್ಲಿ ಈ ಪ್ರದೇಶಕ್ಕೆ ವಿವಿಧೆಡೆಯಿಂದ ವಲಸೆ ಹಕ್ಕಿಗಳು ಆಗಮಿಸುತ್ತವೆ. ಹಾಗಾಗಿಯೇ, ಪಕ್ಷಿಗಳ ಫೋಟೊ ಸೆರೆಹಿಡಿಯಲು ದರ್ಶನ್ ತೆರಳಿದ್ದಾರೆ. (ದಿಗ್ವಿಜಯ ನ್ಯೂಸ್)