ಉತ್ತರಾಖಂಡದಲ್ಲಿ ಬಲೂನ್ ವೈ-ಫೈ!

ಭಾರತದ ಕೆಲ ಭಾಗಗಳ ಕುಗ್ರಾಮಗಳಿಗೆ ಮೊಬೈಲ್ ನೆಟ್​ವರ್ಕ್ ಅಥವಾ ಅಂತರ್ಜಾಲ ಸಂಪರ್ಕ ಕಲ್ಪಿಸುವುದು ಅಸಾಧ್ಯ ಎನ್ನುವ ಪರಿಸ್ಥಿತಿಯಿದೆ. ಇಂತಹ ಹಳ್ಳಿಗಳಲ್ಲಿನ ಮುಗ್ಧ ಜನರನ್ನು ಬೆದರಿಸಿ ಕೆಂಪು ಉಗ್ರರು ತಮ್ಮ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ತಂತ್ರಜ್ಞಾನದ ಮೂಲಕ ಜನರನ್ನು ಸೆಳೆಯಲು ಹಾಗೂ ನಾಗರಿಕ ಜಗತ್ತಿನ ಸೌಕರ್ಯ ನೀಡಲು ಉತ್ತರಾಖಂಡ ಸರ್ಕಾರ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಏರೋಸ್ಟಾಟ್ ಬಲೂನ್ ಮೂಲಕ ವೈ-ಫೈ ಸಂಪರ್ಕ ನೀಡುವ ಯೋಜನೆಗೆ ಮುಖ್ಯಮಂತ್ರಿ ಟಿ.ಎಸ್.ರಾವತ್ ಚಾಲನೆ ನೀಡಿದ್ದಾರೆ.

ಬಲೂನ್ ವಿಶೇಷತೆ

  • ಗಾತ್ರ- 6 ಮೀಟರ್
  • ವೈ-ಫೈ ವ್ಯಾಪ್ತಿ- 7.5 ಕಿ.ಮೀ
  • ವೈ-ಫೈ ಸಾಮರ್ಥ್ಯ- 5 ಎಂಬಿಪಿಎಸ್
  • ಸಂಪರ್ಕ ಕ್ರಮ- ಪಾಸ್​ವರ್ಡ್ ಬಳಸದೇ ನೇರವಾಗಿ ಸಾರ್ವಜನಿಕರು ಅಂತರ್ಜಾಲ ಬಳಸಬಹುದು
  • ಉಪಕರಣ ವೆಚ್ಚ- 50 ಲಕ್ಷ ರೂ.

ಅನಿವಾರ್ಯವೇನು?

  • ಉತ್ತರಾಖಂಡದ 16,780 ಹಳ್ಳಿಗಳಲ್ಲಿ 680 ಹಳ್ಳಿಗಳಿಗೆ ಮೊಬೈಲ್ ಸಂಪರ್ಕವಿಲ್ಲ ಥಿ ಇಂತಹ ಕುಗ್ರಾಮಗಳಲ್ಲಿ ನೆಟ್​ವರ್ಕ್ ಟವರ್ ನಿರ್ಮಾಣ ಕಷ್ಟಸಾಧ್ಯ ಹಾಗೂ ದುಬಾರಿ
  • ಕೆಲವೆಡೆ ಸೋಲಾರ್ ಆಧಾರಿತ ವೈ-ಫೈ ನೆಟ್​ವರ್ಕ್ ನೀಡಿದ್ದರೂ ಸರ್ವ ಋತು ಆಗಿರಲು ಅಸಾಧ್ಯ ಥಿ ನಕ್ಸಲ್ ಪೀಡಿತ ಪರದೇಶಗಳಲ್ಲಿ ಭದ್ರತಾ ಚಟುವಟಿಕೆಗೂ ಈ ತಂತ್ರಜ್ಞಾನ ನೆರವಾಗಲಿದೆ

2013ರ ಪ್ರಳಯದ ಆತಂಕ!

ಉತ್ತರಾಖಂಡ 2013ರಲ್ಲಿ ಪ್ರಳಯಾಂತಕ ಮಳೆಗೆ ನಡುಗಿಹೋಗಿತ್ತು. ಕೇದಾರನಾಥ ಸೇರಿ ಸಾಕಷ್ಟು ಪುಣ್ಯ ಕ್ಷೇತ್ರಗಳು ಅಕ್ಷರಶಃ ನರಕದಂತಾಗಿದ್ದವು. ಸಂತ್ರಸ್ತರನ್ನು ಸಂರ್ಪಸಲು ರಾಜ್ಯ ಸರ್ಕಾರಕ್ಕೆ ವಾರಗಟ್ಟಲೇ ಸಮಯ ಹಿಡಿದರೂ ಸಾಧ್ಯವಾಗಿರಲಿಲ್ಲ. ಭೀಕರ ಮಳೆಗೆ ಎಲ್ಲ ಸಂಪರ್ಕಗಳ ನಾಶವಾಗಿದ್ದವು. ಹೀಗಾಗಿ ಏರೋಸ್ಟಾಟ್ ಬಲೂನ್ ತಂತ್ರಜ್ಞಾನದಿಂದ ತುರ್ತು ಪರಿಸ್ಥಿತಿಯಲ್ಲೂ ಸಂಪರ್ಕಕ್ಕೆ ಸಾಧ್ಯ ಎನ್ನುವುದು ಸರ್ಕಾರ ಆಲೋಚನೆಯಾಗಿದೆ.

ಏನಿದು?

ಸೈನ್ಯದಲ್ಲಿ ಹೆಚ್ಚಾಗಿ ಏರೋಸ್ಟಾಟ್ ಬಲೂನ್ ತಂತ್ರಜ್ಞಾನ ಬಳಕೆಯಾಗುತ್ತದೆ. ಆದರೆ ಇದೇ ತಂತ್ರಜ್ಞಾನವನ್ನು ಭಾರತದ ಕುಗ್ರಾಮಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ(ಐಟಿಡಿಎ) ಮುಂದಾಗಿದೆ. ಏರೋಸ್ಟಾಟ್ ಬಲೂನಿನಲ್ಲಿ ವೈ-ಫೈ ಮೋಡೆಮ್ ಟ್ರಾನ್ಸ್​ರಿಸೀವರ್ ಎಂಟೆನಾ, ಸರ್ವೆಲೆನ್ಸ್ ಕ್ಯಾಮೆರಾಗಳನ್ನು ಈ ಬಲೂನಿನಲ್ಲಿ ಅಳವಡಿಸಲಾಗಿರುತ್ತದೆ. ಸುಮಾರು 14 ದಿನಗಳವರೆಗೆ ಭೂಮಿಯ ಮೇಲೆ ಇದು ಹಾರಾಡುವ ಸಾಮರ್ಥ್ಯ ಹೊಂದಿದೆ. ಬಲೂನಿನೊಳಗೆ ಹೈಡ್ರೋಜನ್​ನ್ನು ತುಂಬಿ ಹಾರಿ ಬಿಡಲಾಗುತ್ತದೆ. ಐಐಟಿ ಮುಂಬೈ ನೆರವಿನಿಂದ ಈ ತಂತ್ರಜ್ಞಾನವನ್ನು ಐಟಿಡಿಎ ರೂಪಿಸಿದೆ.

Leave a Reply

Your email address will not be published. Required fields are marked *