ಯೋಧರ ಜತೆ ದೀಪಾವಳಿ ಆಚರಣೆ; ದೇಶದ ಜನತೆಗೆ ಶುಭಕೋರಿದ ಮೋದಿ

ಹರ್ಸಿಲ್​​: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು ಪ್ರಧಾನಿ ಮೋದಿ ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್​ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬ ಆಚರಿಸಿದರು.

ಉತ್ತರಾಖಂಡದ ಹರ್ಸಿಲ್​ ಗ್ರಾಮಕ್ಕೆ ಭೇಟಿ ನೀಡಿ ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿ, ಅತಿ ಎತ್ತರದ ಹಿಮಾವೃತ ಪ್ರದೇಶಗಳಲ್ಲಿ ತಮ್ಮ ಕರ್ತವ್ಯವನ್ನು ಭಕ್ತಿಯಿಂದ ಮಾಡುವ ಇವರಿಂದಲೇ ದೇಶದ ಶಕ್ತಿ ಹೆಚ್ಚುತ್ತಿದೆ ಮತ್ತು 125 ಕೋಟಿ ಭಾರತೀಯರ ಕನಸುಗಳ ಭದ್ರವಾಗಿದೆ ಎಂದರು.

ದೀಪಾವಳಿ ದೀಪಗಳ ಹಬ್ಬವಾಗಿದ್ದು ನಾವು ಒಳ್ಳೆತನವನ್ನು ಹಂಚಿ ಭಯವನ್ನು ದೂರ ಮಾಡಬೇಕು ಎಂದ ಅವರು, ಯೋಧರು ತಮ್ಮ ಕರ್ತವ್ಯದಿಂದ ಜನರಲ್ಲಿ ಭದ್ರತೆ ನೀಡುವುತ್ತಿರುವುದರ ಜತೆ ನಿರ್ಭಯದಿಂದ ಜೀವನ ಮಾಡುವಂತಾಗಿದೆ ಎಂದರು.

ನಾನು ಗುಜರಾತಿನ ಮುಖ್ಯಮಂತ್ರಿಯಾದಾಗಿನಿಂದಲೂ ದೀಪಾವಳಿ ಹಬ್ಬದ ದಿನ ಯೋಧರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಕಳೆದ ವರ್ಷದ ದೀಪಾವಳಿ ಸಂಭ್ರಮವನ್ನು ಹಂಚಿಕೊಂಡರು. ಯೋಧರ ಭೇಟಿ ವೇಳೆ ಮೋದಿ ಅವರಿಗೆ ಸಿಹಿ ವಿತರಿಸಿದರು.

ಇದಕ್ಕೂ ಮುಂಚೆ ಕೇದರನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಮೋದಿ, ಟ್ವಿಟರ್​ನಲ್ಲಿ ದೇಶದ ಪ್ರಜೆಗಳಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಇಸ್ರೇಲ್ ಪ್ರಧಾನಿ ನೇತನ್ಯಾಹುಗೆ ನರೇಂದ್ರ ಮೋದಿ ಅವರೊಗೆ ದೀಪಾವಳಿ ಶುಭಾಶಯ ಕೋರಿದ್ದು, ಮರು ಟ್ವೀಟ್​ ಮಾಡಿದ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)