ಮದುವೆಗೆ ಹೊರಟಿದ್ದವರ ಕಾರಿಗೆ ಟ್ರಕ್​ ಡಿಕ್ಕಿ: ಬಿಜೆಪಿ ಸಚಿವನ ಮಗ ಸ್ಥಳದಲ್ಲೇ ಸಾವು

ನವದೆಹಲಿ: ಉತ್ತರಖಾಂಡ ಬಿಜೆಪಿ ಸಚಿವ ಅರವಿಂದ್​ ಪಾಂಡೆ ಅವರ ಪುತ್ರ ಅಂಕುರ್ ಪಾಂಡೆ ಇಂದು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಂಕುರ್​ ಪಾಂಡೆ ಸೇರಿ ಮತ್ತಿತರರು ಮದುವೆಗೆಂದು ಗೋರಖ್​ಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಫರಿದಾಬಾದ್​ ಬಳಿ ಅಂಕುರ್​ ಪಾಂಡೆ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಕುರ್​ ಪಾಂಡೆ ಸೇರಿ ಒಟ್ಟು ಮೂವರು ಮೃತಪಟ್ಟಿದ್ದು ಇನ್ನೋರ್ವರಿಗೆ ಗಂಭೀರ ಗಾಯವಾಗಿದೆ.

ಅರವಿಂದ್​ ಪಾಂಡೆ ಅವರು ಉತ್ತರಖಾಂಡದ ಶಾಲಾ ಮತ್ತು ಸಂಸ್ಕೃತ ಶಿಕ್ಷಣ, ಕ್ರೀಡೆ, ಯುವಜನ ಅಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಗಳ ಸಚಿವರು.

Leave a Reply

Your email address will not be published. Required fields are marked *