3 ಲಕ್ಷ ಮತಗಳ ಅಂತರದಿಂದ ಗೆಲುವು ಖಚಿತ, ರಾಜ್ಯ ಸರ್ಕಾರಕ್ಕೆ ಇಚ್ಛಾಮರಣದ ದಿನಗಳು ಸನ್ನಿಹಿತ: ಅನಂತಕುಮಾರ್ ಹೆಗಡೆ

ಉತ್ತರ ಕನ್ನಡ: ತಾನು 3 ಲಕ್ಷಕ್ಕೂ ಹೆಚ್ಚು ಅಂತರಗಳಲ್ಲಿ ಗೆಲುವು ಸಾಧಿಸುವೆ. ಕೇಂದ್ರದಲ್ಲಿ ಎನ್‌ಡಿಎ ಸ್ಥಾನ ಭದ್ರಪಡಿಸಿಕೊಳ್ಳಲಿದೆ. 2/3 ಮೆಜಾರಿಟಿಯಲ್ಲಿ ಸ್ಥಾನ ಪಡೆಯಲಿದೆ. ಕರ್ನಾಟಕದಲ್ಲಿ ಬಿಜೆಪಿ ದಾಖಲೆ ಸ್ಥಾನ ಪಡೆದುಕೊಳ್ಳಲಿದೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಅನಂತಕುಮಾರ್‌ ಹೆಗಡೆ ತಿಳಿಸಿದರು.

ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿ, ಜನ ಬಿಜೆಪಿ ಪರವಾಗಿ ಮತ ನೀಡಿದ್ದಾರೆ. ಮೋದಿಯವರ ನೇತೃತ್ವದ ಸರ್ಕಾರದಲ್ಲಿ ನಂಬಿಕೆ ಇದೆ‌. ಇದು ಜಿಲ್ಲೆಯ ಪ್ರಬುದ್ಧ ಮತದಾರರಿಗೆ ಸಿಕ್ಕ ಗೆಲುವು. ರಾಜ್ಯ ಮೈತ್ರಿ ಸರ್ಕಾರ ಇಚ್ಛಾಮರಣ ಪಡೆಯುವ ದಿನ ಎಣಿಸಲಿದೆ ಎಂದರು.

ಇನ್ನೂ ಸಾಕಷ್ಟು ಮತ ಎಣಿಕೆ ಬಾಕಿ ಇದೆ. 3 ಲಕ್ಷ ಮತಗಳ ಅಂತರದಿಂದ ನಾವು ಗೆಲ್ಲುತ್ತೇವೆ. ಬಿಜೆಪಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಪಡೆಯಲಿದೆ. ದೇಶದಲ್ಲಿ ದಾಖಲೆ ಮತಗಳಿಂದ ಎನ್‌ಡಿಎ ಜಯಗಳಿಸಲಿದೆ. ನನನಗೆ ಭವಿಷ್ಯ ಹೇಳಿ ರೂಢಿ ಇಲ್ಲ ಎಂದು ಹೇಳಿದರು.

2,98,454 ಮತಗಳ ಮುನ್ನಡೆ

ಮೈತ್ರಿ ಅಭ್ಯರ್ಥಿ ಆನಂದ್‌ ಅಸ್ನೋಟಿಕರ್‌ ವಿರುದ್ಧ ಸಂಸದ ಅನಂತಕುಮಾರ್‌ ಹೆಗಡೆ ಭಾರಿ ಅಂತರ ಕಾಯ್ದುಕೊಂಡಿದ್ದು, ಅತೀ ಹೆಚ್ಚು ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. 10 ನೇ ಸುತ್ತಿನ ಮುಕ್ತಾಯದ ವೇಳೆಗೆ 2,98, 454 ಮತಗಳ ಅಂತರದಿಂದ ಹೆಗಡೆ ಮುನ್ನಡೆ ಸಾಧಿಸಿದ್ದಾರೆ. 4,74,522 ಲಕ್ಷ ಮತಗಳನ್ನು ಪಡೆದುಕೊಂಡಿದ್ದರೆ, 1,76,068 ಲಕ್ಷ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *