ರೈಲು ದುರಂತ ತಡೆದ ಬಾಲಕರು

ಕುಮಟಾ(ಉತ್ತರಕನ್ನಡ) : ಕೊಂಕಣ ರೈಲ್ವೆ ನಿಲ್ದಾಣದ ಬಳಿ ಶನಿವಾರ ತುಂಡಾಗಿದ್ದ ರೈಲು ಹಳಿಯನ್ನು ಕಂಡ ಬಾಲಕರಿಬ್ಬರು ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ.

ಮೂರೂರು ರಸ್ತೆಯಲ್ಲಿನ ಬಿಸಿಎಂ ಹಾಸ್ಟೆಲ್​ನಲ್ಲಿರುವ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ ನಾರಾಯಣ ರೆಡ್ಡಿ ಅರ್ಸನಾಳ ಹಾಗೂ 8ನೇ ತರಗತಿ ಓದುತ್ತಿರುವ ಶಶಿಕುಮಾರ ವಿನಾಯಕ ನಾಯ್ಕ ಹಳಕಾರ ಬೆಟ್ಟದಲ್ಲಿ ಕಾಡುಹಣ್ಣುಗಳನ್ನು ಆರಿಸಲು ಹೋಗಿದ್ದಾರೆ. ಈ ವೇಳೆ ಟ್ರ್ಯಾಕ್ ಬದಲಾವಣೆ ಜಾಗದಲ್ಲಿ ಹಳಿ ತುಂಡಾಗಿದ್ದನ್ನು ಗಮನಿಸಿ, ತಕ್ಷಣ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮುಂಬೈ ರೈಲನ್ನು ಮುಂದೆ ಹೋಗದಂತೆ ತಡೆದಿದ್ದಾರೆ. ಬಾಲಕರ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ.

One Reply to “ರೈಲು ದುರಂತ ತಡೆದ ಬಾಲಕರು”

Comments are closed.