ಉತ್ತರ ಕನ್ನಡ ಜಿಲ್ಲೆಗೆ ಬೇಕು 50 ಹೊಸ ಬಸ್

blank

ಶಿರಸಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ 84 ಹೊಸ ಬಸ್‌ಗಳು ಉತ್ತರ ಕನ್ನಡ ವಿಭಾಗಕ್ಕೆ ಪೂರೈಕೆ ಆಗಿವೆ. ಆದರೆ, ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರು ಜಾಸ್ತಿಯಾಗಿ ಈ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ವಿಭಾಗದಿಂದ ಇನ್ನೂ 50 ಹೊಸ ಬಸ್‌ಗಳಿಗೆ ಬೇಡಿಕೆ ಸಲ್ಲಿಸಲು ನಿರ್ಧರಿಸಲಾಗಿದೆ.
ಹೌದು, ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿವೆ. ಗ್ರಾಮೀಣ ಸಾರಿಗೆ ಮತ್ತು ಜಿಲ್ಲಾ ಮಟ್ಟದಲ್ಲಿ ಮಹಿಳೆಯರ ಪ್ರಯಾಣ ಜಾಸ್ತಿ ಇದೆ. ಪ್ರತಿ ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಮಹಿಳೆಯರಿಗೆ ಸಂಸ್ಥೆಯಿಂದ ಸರಾಸರಿ 37 ಲಕ್ಷ ರೂ. ಮೌಲ್ಯದ ಟಿಕೆಟ್ ಮಹಿಳೆಯರಿಗೆ ನೀಡಲಾಗುತ್ತಿದೆ. ಬಸ್‌ಗಳು ಬಹುತೇಕ ಕಿಕ್ಕಿರಿದು ತುಂಬಿದ ಸ್ಥಿತಿಯಲ್ಲೇ ಸಂಚರಿಸುತ್ತಿವೆ. ಉತ್ತರ ಕನ್ನಡ ಘಟಕದಲ್ಲಿ ಒಟ್ಟು 575 ಬಸ್‌ಗಳಿದ್ದರೂ 15 ಲಕ್ಷ ಕಿಮೀ ಮೇಲ್ಪಟ್ಟು ಸಂಚರಿಸಿದ ಬಸ್‌ಗಳ ಸಂಖ್ಯೆಯೇ ಅಧಿಕ. ಮಾರ್ಗ ಮಧ್ಯೆ ಗ್ರಾಮೀಣ ಸಾರಿಗೆ ಬಸ್‌ಗಳು ಕೆಟ್ಟು ನಿಲ್ಲುವುದು, ಕಂಡಕ್ಟರ್, ಡ್ರೈವರ್‌ಗಳು ದಾರಿ ಮಧ್ಯೆ ಊಟ ತಿಂಡಿ ಇಲ್ಲದೆ ಕುಳಿತಿರುವುದು ಸಾಮಾನ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹಳೇ ಬಸ್‌ಗಳನ್ನು ಹುಬ್ಬಳ್ಳಿಯ ಕಾರ್ಯಾಗಾರಕ್ಕೆ ಕಳಿಸಿ ರಿಪೇರಿ, ಹೊಸ ಬಾಡಿ ನಿರ್ಮಿಸಿ ಮತ್ತೆ ಆಯಾ ಘಟಕಗಳಿಗೆ ಕಳಿಸಿಕೊಡಲಾಗುತ್ತಿದೆ. ಪ್ರತಿ ಬಸ್‌ಗಳ ನವೀಕರಣಕ್ಕೆ 6.5 ಲಕ್ಷ ರೂ. ಖರ್ಚು ತಗುಲುತ್ತಿದ್ದು, ಈ ವರ್ಷ ಇಂತಹ 26 ಬಸ್‌ಗಳನ್ನು ಕಳೆದ ನಾಲ್ಕು ತಿಂಗಳಿನಲ್ಲಿ ನವೀಕರಣ ಮಾಡಲಾಗಿದೆ. ಇಷ್ಟಾದರೂ, ಜಿಲ್ಲೆಯ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಬಸ್‌ಗಳು ಬೇಕಾಗಿವೆ. ಹೊಸ ಬಸ್‌ಗಳ ಪೂರೈಕೆ ಆದರೆ, ಜಾಸ್ತಿ ಹಳೆಯ, ಅಧಿಕ ಓಡಾಟ ಮಾಡಿದ ಬಸ್‌ಗಳನ್ನು ಹಂತಹಂತವಾಗಿ ಕಡಿಮೆಗೊಳಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಈ ನಡುವೆ ಶಕ್ತಿ ಯೋಜನೆ ಆರಂಭಗೊಂಡ ಬಳಿಕ ಉಂಟಾದ ಬಸ್ ಕೊರತೆ ಸರಿದೂಗಿಸಿಕೊಳ್ಳಲು ಉತ್ತರ ಕನ್ನಡ ವಿಭಾಗದಿಂದ ಹೊರ ರಾಜ್ಯಗಳಿಗೆ ತೆರಳುತ್ತಿದ್ದ 15ಕ್ಕೂ ಅಧಿಕ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಮುಖ್ಯವಾಗಿ ಹೈದರಾಬಾದ್, ಪಿಂಪ್ರಿ, ಮುಂಬೈ, ಪೂಣೆ ಇನ್ನಿತರ ಮಾರ್ಗಗಳನ್ನು ಸ್ಥಗಿತಗೊಳಿಸಿ ಈ ಬಸ್‌ಗಳನ್ನು ಜಿಲ್ಲೆಯ ಪ್ರಯಾಣಿಕರ ಸಲುವಾಗಿ ಸ್ಥಳೀಯವಾಗಿ ಬಿಡಲಾಗುತ್ತಿತ್ತು. ರಾಜ್ಯ ಸರ್ಕಾರ ಹುಬ್ಬಳ್ಳಿ ವಿಭಾಗಕ್ಕೆ ಹೊಸದಾಗಿ 20 ಪಲ್ಲಕ್ಕಿ ಬಸ್‌ಗಳನ್ನು ನೀಡಲು ನಿರ್ಧರಿಸಲಾಗಿದ್ದು, ಉತ್ತರ ಕನ್ನಡಕ್ಕೂ ಈ ಬಸ್ ನೀಡಿದರೆ ಅಂತಾರಾಜ್ಯ ಮಾರ್ಗಗಳನ್ನು ಪುನರಾರಂಭಿಸಲು ಸಂಸ್ಥೆ ನಿರ್ಧರಿಸಿದೆ.

Share This Article

ನಿದ್ರೆಯಿಂದ ಕ್ಯಾನ್ಸರ್​ವರೆಗೆ… ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ! Grapes

Grapes : ಪ್ರತಿದಿನ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದ್ರಾಕ್ಷಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.…

ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೆಲೆ ಮತ್ತು ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಖಚಿತ! Bamboo Salt

Bamboo Salt : ಆರು ಮಸಾಲೆಗಳಲ್ಲಿ ಉಪ್ಪು ಕೂಡ ಒಂದು. ಭಾರತೀಯ ಪಾಕಪದ್ಧತಿಯಲ್ಲಿ ಉಪ್ಪು ಬಹಳ…

ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್​ಬೆರಿ ಎಂದು ಕರೆಯಲಾಗುತ್ತದೆ. ಇದು…