ಭ್ರಷ್ಟಾಚಾರ ರಹಿತ ಉತ್ತಮ ಆಡಳಿತವೇ ಪ್ರಜಾಕೀಯ ಪಕ್ಷದ ಗುರಿ

ಕಲಬುರಗಿ: ಬಂಡವಾಳ ಶಾಹಿಗಳ ಕೈಯಲ್ಲಿ ಸಿಲುಕಿ ರಾಜಕೀಯ ನಲುಗುತ್ತಿದ್ದು, ಮತ ಮತ್ತು ಕಾರ್ಯಕರ್ತರನ್ನು ಖರೀದಿಸುವುದು ದೊಡ್ಡ ದಂಧೆಯಾಗಿದೆ. ಇದಕ್ಕೆ ಬ್ರೇಕ್ ಹಾಕಿ ಭ್ರಷ್ಟಾಚಾರರಹಿತ, ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡಲು ಪ್ರಜಾಕೀಯ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಚಿತ್ರನಟ ಉಪೇಂದ್ರ ಮನವಿ ಮಾಡಿದರು.
ರಾಜಕೀಯದಲ್ಲಿ ಬದಲಾವಣೆ ತರುವುದೇ ನಮ್ಮ ಉದ್ದೇಶ. ಪ್ರತಿಸ್ಪರ್ಧಿಗಳ ಬಗ್ಗೆ ಯೋಚಿಸುವುದು ರಾಜಕೀಯ, ಜನರ ಬಗ್ಗೆ ಯೋಚಿಸುವುದು ಪ್ರಜಾಕೀಯ. ಕಲಬುರಗಿ ಕ್ಷೇತ್ರದ ಮಹೇಶ ಅವರನ್ನು ಕಣಕ್ಕಿಳಿಸಿದ್ದು, ಜನರು ಬೆಂಬಲಿಸಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಪ್ರಣಾಳಿಕೆ ಮಾಡಿ ಹುಸಿ ಭರವಸೆ ನೀಡಲ್ಲ. ಬದಲಿಗೆ ಜನರಿಂದಲೇ ಅಭಿಪ್ರಾಯ ಸಂಗ್ರಹಿಸಿ ಕೆಲಸ ಮಾಡುವುದು ನಮ್ಮ ಪಕ್ಷದ ಗುರಿ. ಪಾರದರ್ಶಕ ಆಡಳಿತ, ಮತದಾರರ ನೋವು-ನಲಿವುಗಳಿಗೆ ಸ್ಪಂದಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಹೇಳಿದರು.
ಬಳ್ಳಾರಿ ಬಿಟ್ಟು ಉಳಿದ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮಂಡ್ಯದಲ್ಲೂ ನಮ್ಮ ಅಭ್ಯರ್ಥಿ ಇದ್ದಾರೆ. ಸುಮಲತಾ ಅವರಿಗೆ ಬೆಂಬಲಿಸಬಹುದಿತ್ತಲ್ಲ ಇಲ್ಲವೇ ಅವರನ್ನೇ ಅಭ್ಯರ್ಥಿ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆಗೆ, ಅಷ್ಟು ದೊಡ್ಡವರನ್ನು ಪರೀಕ್ಷೆಗೊಳಪಡಿಸಿ ಟಿಕೆಟ್ ನೀಡುವಷ್ಟು ದೊಡ್ಡವ ನಾನಲ್ಲ ಎಂದರು.
ಅಭ್ಯರ್ಥಿ ಮಹೇಶ ಲಮಾಣಿ ಮಾತನಾಡಿ, ನಾನೊಬ್ಬ ರೈತನ ಮಗ. ಟಿಕೆಟ್ ನೀಡುವ ಮೂಲಕ ಉಪೇಂದ್ರ ಉತ್ತಮ ಅವಕಾಶ ಕಲ್ಪಿಸಿದ್ದಾರೆ. ಇದರಿಂದಾಗಿ ನಾನು ಗೆದ್ದಂತಾಗಿದೆ, ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಹೊರತುಪಡಿಸಿ ಉಳಿದ 27 ಕ್ಷೇತ್ರಗಳಲ್ಲಿ ಪ್ರಜಾಕೀಯ ಅಭ್ಯರ್ಥಿ ಕಣದಲ್ಲಿದ್ದು, ಅವರ ಪರ ಪ್ರಚಾರ ಇತರ ಕೆಲಸಗಳ ಒತ್ತಡದಿಂದ ನಾನು ಸ್ಪರ್ಧಿಸಿಲ್ಲ. ಮುಂದಿನ ಸಲ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಯಾವ ಕ್ಷೇತ್ರದಿಂದ ಅನ್ನುವುದನ್ನು ಈ ಚುನಾವಣೆ ಬಳಿಕ ನಿರ್ಧರಿಸುತ್ತೇನೆ.
|ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ

One Reply to “ಭ್ರಷ್ಟಾಚಾರ ರಹಿತ ಉತ್ತಮ ಆಡಳಿತವೇ ಪ್ರಜಾಕೀಯ ಪಕ್ಷದ ಗುರಿ”

  1. Upendra ideas are good, But he must have due presence of mind to understand real problems prevailing in society.
    Delivering emotional dialogs is just an art.
    But understanding absolute ground realities and solving those problems effectively selflessly is the need of the our for collective progress of the nation.
    Only Our PM NAMO has that potential.
    So every must support him instead making noise here and there retarding the progress.

Comments are closed.