ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುತ್ತಿರುವುದು ಸಂತಸ ತಂದಿದೆ: ನಟ ಉಪೇಂದ್ರ

ಬೆಂಗಳೂರು: ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುತ್ತಿರುವುದು ಸಂತಸ ತಂದಿದೆ. ಇದು ನಿಮ್ಮ ಹಕ್ಕು. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ ಎಂದು ಉತ್ತಮರ ಪ್ರಜಾಕೀಯ ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಮನವಿ ಮಾಡಿದರು.

ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯುಪಿಪಿಯಿಂದ 27 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ನಮ್ಮ ಪಕ್ಷವು ಸ್ಫರ್ಧೆಯಲ್ಲಿದ್ದು, ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಎಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಹೇಳಿದರು.

ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ, ಇವಿಎಂ ಮಿಷನ್ ಅಲ್ಲಿ ಮೊದಲ ಬಾರಿಗೆ ಪ್ರಜಾಕೀಯ ಪಕ್ಷ ಕಾಣಿಸುತ್ತಿದೆ. ಇದು ನನಗೆ ತುಂಬ ಹೆಮ್ಮೆಯ ವಿಚಾರ. ಯಾಕೆಂದರೆ ಇದಕ್ಕಾಗಿ ಉಪೇಂದ್ರ ತುಂಬ ಕಷ್ಟ ಪಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಬಹಳ ಮುಖ್ಯ. ಇದು ಉಪೇಂದ್ರ ಅವರ ಬಹಳ ದಿನಗಳ ಕನಸ್ಸಾಗಿತ್ತು. ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್)