ತೆಲಂಗಾಣ: ತೆಲುಗು ಚಿತ್ರರಂಗದ ಪವರ್ಸ್ಟಾರ್, ನಟ ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಅದ್ಯಾಕೋ ಸರಿಯಾದ ಮಹೂರ್ತ ಕೂಡಿ ಬರುತ್ತಿಲ್ಲ. ಕಳೆದ ಹಲವು ದಿನಗಳಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದು, ಯಾವಾಗ ಪ್ರಾರಂಭ ಆಗಲಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗಿರಲಿ, ಚಿತ್ರತಂಡಕ್ಕೆ ಸರಿಯಾಗಿ ಗೊತ್ತಿಲ್ಲ. ಅದರಲ್ಲೂ ಡಿಸಿಎಂ ಆದ ಬಳಿಕ ತಮ್ಮ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿರುವ ಪವನ್, ತಮ್ಮ ಚಿತ್ರಗಳತ್ತ ಮರಳಲು ಆದಷ್ಟು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಉಸ್ತಾದ್ ಭಗತ್ ಸಿಂಗ್ ಚಿತ್ರದ ಚಿತ್ರೀಕರಣ ಮತ್ತೆ ಮುಂದೂಡಿಕೆಯಾಗಿದ್ದು, 2025ರಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂಬ ಮಾಹಿತಿ ಲಭಿಸಿದೆ.
ಇದನ್ನೂ ಓದಿ: ಮೂವರು ವಿದ್ಯಾರ್ಥಿಗಳ ದುರ್ಮರಣ
ಹರೀಶ್ ಶಂಕರ್ ನಿರ್ದೇಶನದ ಪವನ್ ಕಲ್ಯಾಣ್ ಅಭಿನಯದ ಕಲ್ಟ್ ಕ್ಲಾಸಿಕ್ ಗಬ್ಬರ್ ಸಿಂಗ್ ಬಳಿಕ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಎರಡನೇ ಸಿನಿಮಾ ಇದಾಗಿದೆ. ವರದಿಗಳ ಪ್ರಕಾರ, ಈ ಚಿತ್ರದ ಶೂಟಿಂಗ್ ಅಕ್ಟೋಬರ್ ತಿಂಗಳಲ್ಲಿ ಪುನರಾರಂಭವಾಗಬೇಕಿತ್ತು. ಆದರೆ, ಇತ್ತೀಚೆಗೆ ಆಂಧ್ರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ರಾಜ್ಯದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟಿರುವ ಪವನ್ ಕಲ್ಯಾಣ್ ಇದೀಗ ತಮ್ಮ ಚಿತ್ರದ ಶೂಟಿಂಗ್ ಅನ್ನು ಮುಂದೂಡುವಂತೆ ಚಿತ್ರತಂಡದ ಜತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಸದ್ಯ ಈ ವಿಷಯ ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು, ಇನ್ನೆರೆಡು ಚಿತ್ರಗಳಾದ ಓಜಿ ಮತ್ತು ಹರಿಹರ ವೀರ ಮಲ್ಲು ಚಿತ್ರವಾದರೂ ಈ ವರ್ಷ ಬಿಡುಗಡೆ ಆಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಪ್ರತ್ಯೇಕವಾಗಿ ಈ ಎರಡು ಚಿತ್ರಗಳ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಈ ವರ್ಷವೇ ತೆರೆ ಕಾಣುವ ನಿರೀಕ್ಷೆ ಇದೆ,(ಏಜೆನ್ಸೀಸ್).
ಮುಂಬೈ ಇಂಡಿಯನ್ಸ್ ಪರ ಆಡುವುದಿಲ್ಲ ರೋಹಿತ್ ಶರ್ಮ! ಅದು ಮುಗಿದೋದ ಅಧ್ಯಾಯ: ಮಾಜಿ ಆಟಗಾರ