ನಿರುಪಯುಕ್ತ ವಸ್ತುಗಳು, ಕಟ್ಟಿಗೆ ದಾಸ್ತಾನುಗಾರಗಳಾದ ಸ್ವಚ್ಛ ಭಾರತದ ಶೌಚಗೃಹಗಳು: ಹಣ ವಾಪಾಸು ಸಾಧ್ಯತೆ!

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಜನರು ಶೌಚಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಅದನ್ನು ಬಳಸಬೇಕಾದ ಉದ್ದೇಶದ ಬದಲಾಗಿ ನಿರುಪಯುಕ್ತ ವಸ್ತುಗಳು ಇಲ್ಲವೇ ಕಟ್ಟಿಗೆ ಸಂಗ್ರಾಹಗಾರಗಳನ್ನಾಗಿ ಮಾರ್ಪಡಿಸಿದ್ದಾರೆ!

ಹಾಗಾದರೆ, ಶೌಚ ವ್ಯವಸ್ಥೆಗೆ ಅವರೆಲ್ಲರ ಏನು ಮಾಡುತ್ತಾರೆ? ಶೌಚಕ್ಕಾಗಿ ಇಂದಿಗೂ ಅವರು ಬಯಲನ್ನೇ ಆಶ್ರಯಿಸಿದ್ದಾರೆ! ಅದೇ ಅವರಿಗೆ ಅನುಕೂಲವಂತೆ…!

ಇದು ಎಂಥ ವಿಪರ್ಯಾಸ ಅಲ್ಲವೇ? ತಾವೇ ಆಯ್ಕೆ ಮಾಡಿಕೊಂಡಿರುವ ಲೋಕಸಭೆಯ ಪ್ರತಿನಿಧಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸುವ ಬದಲು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಸೇರಿ ಎಲ್ಲ ಅಧಿಕಾರಿಗಳು ಇದರಿಂದ ಸಿಟ್ಟಾಗಿದ್ದಾರೆ. ಹಾಗಾಗಿ, ಗ್ರಾಮಸ್ಥರು ಶೌಚಗೃಹ ಬಳಸುವಂತೆ ಮಾಡಲು ಅವರೊಂದು ಯೋಜನೆ ರೂಪಿಸಿದ್ದಾರೆ. ಅದೇನೆಂದರೆ…

ಪಂಚಾಯಿತಿ ವತಿಯಿಂದ ವಾರಾಣಸಿಯ ಪ್ರತಿ ಗ್ರಾಮಕ್ಕೂ ಪಂಚಾಯ್ತಿಗಳ ವತಿಯಿಮಧ ಸ್ವಚ್ಛಾಗ್ರಹಿಗಳ ತಂಡವನ್ನು ರಚಿಸಲಾಗುತ್ತದೆ. ಈ ಸ್ವಚ್ಛಾಗ್ರಹಿಗಳು ಆಯಾ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡುತ್ತಾರೆ. ಶೌಚಗೃಹವನ್ನು ಅದರ ಉದ್ದೇಶಕ್ಕೆ ಬಳಸುತ್ತಿದ್ದರೆ ಅಡ್ಡಿಯಿಲ್ಲ. ಇಲ್ಲವಾದರೆ ಮೊದಲಿಗೆ ಮನೆಯ ಮಾಲೀಕರಿಗೆ ನೋಟಿಸ್​ ಕೊಟ್ಟು, ಶೌಚಗೃಹವನ್ನು ಅದರ ಉದ್ದೇಶಕ್ಕೆ ಬಳಸುವಂತೆ ಬುದ್ಧಿವಾದ ಹೇಳುತ್ತಾರೆ.

ಇದಕ್ಕೂ ಮಿಕ್ಕಿ ಶೌಚಗೃಹವನ್ನು ಅದರ ಉದ್ದೇಶಕ್ಕೆ ಬಳಸದೆ, ಬಯಲನ್ನೇ ನೆಚ್ಚಿಕೊಂಡಿದ್ದು ಕಂಡು ಬಂದರೆ, ಶೌಚಗೃಹ ನಿರ್ಮಾಣಕ್ಕೆ ಮನೆಯ ಮಾಲೀಕರಿಗೆ ಕೊಟ್ಟಿರುವ ಹಣವನ್ನು ವಾಪಸು ಪಡೆದುಕೊಳ್ಳಲು ಮುಂದಾಗುತ್ತಾರೆ. ಹೀಗೆ ಮಾಡುವಂತೆ ವಾರಾಣಸಿಯ ಜಿಲ್ಲಾಧಿಕಾರಿ ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *