ತಂತ್ರಜ್ಞಾನವಿರುವುದು ಅಭಿವೃದ್ಧಿಗೆ ಹೊರತು ವಿನಾಶಕ್ಕಾಗಿ ಅಲ್ಲ: ನರೇಂದ್ರ ಮೋದಿ

ಅಬುದಾಬಿ: ತಂತ್ರಜ್ಞಾನವಿರುವುದು ಅಭಿವೃದ್ಧಿಗೆ. ನಾವು ತಂತ್ರಜ್ಞಾನವನ್ನು ಅಭಿವೃದ್ಧಿಗೆ ಬಳಸಿಕೊಳ್ಳಬೇಕೇ ಹೊರತು ವಿನಾಶಕ್ಕಾಗಿ ಅಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಮೂರುದಿನಗಳ ಪ್ರವಾಸದಲ್ಲಿರುವ ಅವರು ಇಂದು ಅಬುದಾಬಿಯಲ್ಲಿ ನಡೆದ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಮಾತನಾಡಿ, 6ನೇ ವಿಶ್ವ ಸರ್ಕಾರಿ ಶೃಂಗಸಭೆಗೆ ಮುಖ್ಯ ಅತಿಥಿಯನ್ನಾಗಿ ಕರೆದಿರುವುದು ಭಾರತದ ಜನರಿಗೆ ಸಂದ ಗೌರವವಾಗಿದೆ.

ತಂತ್ರಜ್ಞಾನವು ಯೋಚನೆಗಳನ್ನು ವೇಗವಾಗಿ ಬದಲಿಸುತ್ತದೆ. ಆದರೆ ಜಾಗತಿಕವಾಗಿ ಇಂದು ತಂತ್ರಜ್ಞಾನವನ್ನು ಕ್ಷಿಪಣಿ ಮತ್ತು ಬಾಂಬ್‌ ತಯಾರಿಕೆಗೆ ಹೂಡಿಕೆ ಮಾಡಿ ವಿನಾಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿಸಿಕೊಂಡೇ ಸೈಬರ್ ಕ್ರೈಂ ಉಪಟಳವನ್ನು ಸಹ ಕೆಲವು ಜನ ನೀಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ತಂತ್ರಜ್ಞಾನದಿಂದ ಮರುಭೂಮಿಯನ್ನು ಬದಲಿಸಬಹುದು ಎನ್ನುವುದಕ್ಕೆ ದುಬೈ ಸೂಕ್ತ ಉದಾಹರಣೆಯಾಗಿದೆ. ಇ ಗವರ್ನೆಸ್‌ ಎಂದರೆ ಎಫೆಕ್ಟೀವ್‌(ಪರಿಣಾಮಕಾರಿ), ಎಫಿಷಿಯಂಟ್‌(ದಕ್ಷ), ಈಸಿ(ಸುಲಭ), ಎಂಪವರ್‌(ಅಧಿಕಾರ) ಮತ್ತು ಈಕ್ವಿಟಿಯಾಗಿದೆ ಎಂದು ತನ್ನದೇ ಶೈಲಿಯಲ್ಲಿ ವ್ಯಾಖ್ಯಾನಿಸಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *