ಪ್ರಜಾಪ್ರಭುತ್ವ ಉಳಿಸಲು ಜ್ಞಾನ ಬಳಸಿ: ವೋಡೆ ಪಿ.ಕೃಷ್ಣ ಸಲಹೆ

blank

ಮೈಸೂರು: ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ನಿಮ್ಮ ಜ್ಞಾನ ಹಾಗೂ ಸೇವಾ ಶಕ್ತಿ ಬಳಸಬೇಕು ಎಂದು ಬೆಂಗಳೂರಿನ ಗಾಂಧಿ ಭವನದ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೋಡೆ ಪಿ.ಕೃಷ್ಣ ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯಡಿ ಮಾನಸ ಗಂಗೋತ್ರಿಯ ಎನ್‌ಎಸ್‌ಎಸ್ ಭವನದಲ್ಲಿ ಆಯೋಜಿಸಿದ್ದ 7ದಿನಗಳ ರಾಷ್ಟ್ರೀಯ ಏಕತಾ ಶಿಬಿರದಲ್ಲಿ ಬುಧವಾರ ಸಮಾರೋಪ ಭಾಷಣ ಮಾಡಿದರು.
ಗ್ರಾಮೀಣ ಕೇಂದ್ರಿತ ಅಭಿವೃದ್ಧಿಗೆ ಎನ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಪ್ರತಿಫಲಾಪೇಕ್ಷೆ ಇಲ್ಲದ ಶಿಬಿರಾರ್ಥಿಗಳ ಸೇವಾ ಮನೋಭಾವವು ಜನರಲ್ಲಿ ಪರಿವರ್ತನೆಯನ್ನು ತರುತ್ತಿದೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಬಹುತ್ವದ ಭಾರತವನ್ನು ಉಳಿಸಬೇಕು. ದೇಶದ ನಿರ್ಮಾತೃಗಳಾದ ಗಾಂಧೀಜಿ, ನೆಹರೂ, ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸಬೇಕು ಎಂದರು.
ಬಡವರ ಪರವಾದ, ಸ್ವಾವಲಂಬಿ, ಜಾತ್ಯತೀತ ಸಮಾಜ ನಿರ್ಮಾಣವು ಎನ್‌ಎಸ್‌ಎಸ್ ಗುರಿಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯು ಗೌರವದಿಂದ ಬದುಕುವ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ. ದೇಶದ ಭ್ರಾತೃತ್ವ, ಸಹಿಷ್ಣುತೆ, ಬಹುತ್ವವನ್ನು ಕಾಪಾಡುತ್ತಿದೆ. ಗಾಂಧಿ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ. ಅದನ್ನು ನಮ್ಮ ಕ್ರಿಯೆ ಮೂಲಕ ತೋರಬೇಕಿದೆ ಎಂದು ಹೇಳಿದರು.
ಎನ್‌ಎಸ್‌ಎಸ್ ತರಬೇತಿ ಸಂಸ್ಥೆಯ ಸಂಯೋಜಕ ಪ್ರೊ.ಬಿ.ಚಂದ್ರಶೇಖರ, ಕಾರ್ಯಕ್ರಮ ಸಂಯೋಜಕ ಪ್ರೊ.ಎಂ.ಬಿ.ಸುರೇಶ, ಕೆ.ಎಂ.ವೀರಯ್ಯ ಇತರರು ಇದ್ದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…