Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಜೀರೋ ಗ್ರಾವಿಟಿಯಲ್ಲೂ ಉಸೇನ್​ ಬೋಲ್ಟ್​ ಶರವೇಗದ ಸರದಾರ!

Thursday, 13.09.2018, 6:58 PM       No Comments

ಪ್ಯಾರಿಸ್​: ವಿಶ್ವದ ಅತ್ಯಂತ ವೇಗದ ಓಟಗಾರ ಎಂದೇ ಖ್ಯಾತರಾಗಿರುವ ಮತ್ತು ಒಲಂಪಿಕ್ಸ್​ನಲ್ಲಿ 8 ಚಿನ್ನದ ಪದಕ ಗೆದ್ದಿರುವ ಉಸೇನ್​ ಬೋಲ್ಟ್​ ಈಗ ಮತ್ತೊಂದು ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ.

ಹೌದು ಭೂಮಿಯ ಮೇಲಿನ ಶರವೇಗದ ಸರದಾರ ಅಂತರಿಕ್ಷದಲ್ಲೂ ತಮ್ಮ ಕಾಲ್ಚಳಕವನ್ನು ತೋರಿದ್ದು, ಜೀರೋ ಗ್ರಾವಿಟಿಯಲ್ಲಿ ನಡೆದ ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ. ಗುರುತ್ವಾಕರ್ಷಣ ಬಲ ಇಲ್ಲದ ವಾತಾವರಣದ ಅನುಭವ ಪಡೆಯಲು ವಿಶೇಷವಾಗಿ ನಿರ್ಮಿಸಿರುವ ಏರ್​ಬಸ್​ ಜೀರೋ ಗ್ರಾವಿಟಿ ಪ್ಲೇನ್​ನಲ್ಲಿ ಉಸೇನ್​ ಬೋಲ್ಟ್​ ರೇಸ್​ನಲ್ಲಿ ಪಾಲ್ಗೊಂಡಿದ್ದರು.

ಫ್ರಾನ್ಸ್​ನ ಅಂತರಿಕ್ಷಯಾತ್ರಿ ಜೇನ್​ ಫ್ರಾಂಕೋಯಿಸ್​ ಕ್ಲರ್ವೆ ಮತ್ತು ನೋವೆಸ್ಪೇಸ್​ನ ಸಿಇಒ ಹಾಗೂ ಫ್ರಾನ್ಸ್​ನ ಇಂಟೀರಿಯರ್​ ಡಿಸೈನರ್​ ಆಕ್ಟೇವ್ ದೆ ಗೌಲೆ ಅವರೊಂದಿಗೆ ಉಸೇನ್​ ರೇಸ್​ನಲ್ಲಿ ಪಾಲ್ಗೊಂಡಿದ್ದರು. ರೇಸ್​ನಲ್ಲಿ ಗೆದ್ದ ಬೋಲ್ಟ್​ ಎಂದಿನಂತೆ ತಮ್ಮದೇ ಶೈಲಿನಲ್ಲಿ ವಿಶಿಷ್ಟವಾಗಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top