ಹೇರ್​ ಪ್ರಾಡಕ್ಟ್​ನಿಂದ ಗರ್ಭಾಶಯದ ಕ್ಯಾನ್ಸರ್​: ಖಾಸಗಿ ಕಂಪನಿ ವಿರುದ್ಧ ದಾವೆ ಹೂಡಿದ ಮಹಿಳೆ

ವಾಷಿಂಗ್ಟನ್​: ಖಾಸಗಿ ಕಂಪನಿ ಮಾರಾಟ ಮಾಡುವ ಕೂದಲು ನೇರಗೊಳಿಸುವ ರಾಸಾಯನಿಕವನ್ನು ಬಳಸಿದ್ದರ ಪರಿಣಾಮ ಗರ್ಭಾಶಯದ ಕ್ಯಾನ್ಸರ್​ ಬಂದಿದೆ ಎಂದು ಆರೋಪಿಸಿ ಅಮೆರಿಕ ಮೂಲದ ಮಹಿಳೆಯೊಬ್ಬಳು ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಪ್ರಕರಣ ವರದಿಯಾಗಿದೆ. ಶುಕ್ರವಾರ (ಅ.21) ಕೋರ್ಟ್​ನಲ್ಲಿ ಮೊಕದ್ದಮ್ಮೆ ದಾಖಲಿಸಿರುವುದಾಗಿ ಸಂತ್ರಸ್ತ ಮಹಿಳೆಯ ಪರ ವಕೀಲರು ತಿಳಿಸಿದ್ದಾರೆ. ದಾವೆ ಹೂಡಿರುವ ಮಹಿಳೆಯ ಹೆಸರು ಜೆನ್ನಿ ಮಿಚೆಲ್​. ಎರಡು ದಶಕಗಳಿಂದ ಖಾಸಗಿ ಕಂಪನಿಯ ಹೇರ್​​ ಪ್ರಾಡಕ್ಟ್​ ಅನ್ನು ಬಳಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಇದೇ ಉತ್ಪನ್ನ ಗರ್ಭಾಶಯದ ಕ್ಯಾನ್ಸರ್​ಗೆ ಕಾರಣವಾಗಿದೆ … Continue reading ಹೇರ್​ ಪ್ರಾಡಕ್ಟ್​ನಿಂದ ಗರ್ಭಾಶಯದ ಕ್ಯಾನ್ಸರ್​: ಖಾಸಗಿ ಕಂಪನಿ ವಿರುದ್ಧ ದಾವೆ ಹೂಡಿದ ಮಹಿಳೆ