ಅಮೆರಿಕದಿಂದ ಥಾಡ್ ಪ್ರಸ್ತಾವನೆ

ನವದೆಹಲಿ: ಎತ್ತರ ಪ್ರದೇಶದ ಸರಹದ್ದಿನ ರಕ್ಷಣಾ ವ್ಯವಸ್ಥೆ (ಟರ್ವಿುನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್- ಥಾಡ್) ಮತ್ತು ಪ್ಯಾಟ್ರಿಯೊಟ್ ಅಡ್ವಾನ್ಸ್ ಕೆಪಾಬಿಲಿಟಿ (ಪ್ಯಾಕ್-3) ಕ್ಷಿಪಣಿ ತಂತ್ರಜ್ಞಾನ ವ್ಯವಸ್ಥೆಯನ್ನು ಭಾರತಕ್ಕೆ ನೀಡಲು ಅಮೆರಿಕ ಮುಂದಾಗಿದೆ.

ಭಾರತ ಹಲವು ವರ್ಷಗಳ ಮಾತುಕತೆ ಬಳಿಕ ರಷ್ಯಾದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿದ್ದು, ಇದಕ್ಕೆ ಬದಲಾಗಿ ಅಮೆರಿಕ ಈ ಪ್ರಸ್ತಾವನೆಯನ್ನು ಭಾರತದ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಥಾಡ್​ನ ನಿಖರ ಮೌಲ್ಯವೆಷ್ಟು ಎನ್ನುವುದರ ಮಾಹಿತಿ ಇಲ್ಲವಾದರೂ ಪ್ರತಿ ಯೂನಿಟ್​ಗೆ 20,097 ಕೋಟಿ ರೂ. ವೆಚ್ಚವಾಗಲಿದೆ. ಕಳೆದ ನವೆಂಬರ್​ನಲ್ಲಿ ಸೌದಿ ಅರೇಬಿಯಾ 44 ಥಾಡ್ ಲಾಂಚರ್ ಮತ್ತು ಕ್ಷಿಪಣಿಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನಾಧರಿಸಿ ಥಾಡ್​ನ ಮೌಲ್ಯ ಅಂದಾಜಿಸಲಾಗಿದೆ.

ಭಾರತ ರಷ್ಯಾದಿಂದ ಖರೀದಿಸಲು ಮುಂದಾಗಿರುವ 5 ಎಸ್-400ಗಳಿಗೆ ಒಟ್ಟು 37,763 ಕೋಟಿ ರೂ. ವೆಚ್ಚವಾಗಲಿದೆ. ಅಮೆರಿಕದ ಶಸ್ತ್ರಾಸ್ತ್ರಗಳತ್ತ ಭಾರತ ಹೆಚ್ಚು ಒಲವು ತೋರುತ್ತಿದೆಯೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ ಇದರ ಸಾಧ್ಯತೆ ಹೆಚ್ಚಾಗಿದೆ. ಭಾರತ ಸೇನೆಯಲ್ಲಿ ರಷ್ಯಾದ ಶಸ್ತ್ರಾಸ್ತ್ರಗಳ ಪ್ರಮಾಣವನ್ನು ನಿಯಮಿತವಾಗಿ ಇಳಿಕೆ ಮಾಡುತ್ತ ಬಂದಿದೆ. 2009-13ರಲ್ಲಿ ಶೇ.78ರಷ್ಟಿದ್ದ ರಷ್ಯಾ ಶಸ್ತ್ರಾಸ್ತ್ರಗಳ ಪ್ರಮಾಣ 2014-18ರಲ್ಲಿ ಶೇ.58ಕ್ಕೆ ಇಳಿಕೆಯಾಗಿದೆ. ರಷ್ಯಾ ಬದಲಾಗಿ ಅಮೆರಿಕದತ್ತ ಭಾರತದ ಒಲವು ಹೆಚ್ಚಾಗಿದ್ದು, ಅಲ್ಲಿನ ಶಸ್ತ್ರಾಸ್ತ್ರ ಖರೀದಿ ಪ್ರಮಾಣ ಕೆಲವೇ ವರ್ಷಗಳಲ್ಲಿ ಶೂನ್ಯದಿಂದ 1.25 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *