Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ದೊಡ್ಡಣ್ಣ ದುಡ್ಡಿಲ್ಲಣ್ಣ!

Sunday, 21.01.2018, 3:03 AM       No Comments

ವಾಷಿಂಗ್ಟನ್: ದಶಕಗಳಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿ ಹಲವು ಜಾಗತಿಕ ರಾಷ್ಟ್ರಗಳ ಬೊಕ್ಕಸ ತುಂಬಿಸುತ್ತಿರುವ ವಿಶ್ವದ ಹಿರಿಯಣ್ಣ ಅಮೆರಿಕ ಸರ್ಕಾರದ ಕೈಗಳೇ ಈಗ ಖಾಲಿ ಖಾಲಿ. ನಿರ್ದಿಷ್ಟ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವ ಬಜೆಟ್ ವಿಧೇಯಕಕ್ಕೆ ಕಾಂಗ್ರೆಸ್​ನ ಮೇಲ್ಮನೆ ಅನುಮೋದನೆ ನೀಡದ ಪರಿಣಾಮ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣ ವಾಗಿದೆ. ಆರೋಗ್ಯ ಸೇರಿದಂತೆ ಕೆಲವು ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದ ಬಾಗಿಲು ಮುಚ್ಚಿದೆ. ಟ್ರಂಪ್ ಅಧ್ಯಕ್ಷರಾಗಿ ಮೊದಲ ವರ್ಷದ ಸಂಭ್ರಮದಲ್ಲಿರುವಾಗಲೇ ಅವರ ಆಡಳಿತಕ್ಕೆ ಈ ಆಘಾತ ಬರಸಿಡಿಲಿನಂತೆ ಬಂದೆರಗಿದೆ. ಈ ಬೆಳವಣಿಗೆಗಳಿಂದ ಆಘಾತಕ್ಕೊಳಗಾಗಿರುವ ಟ್ರಂಪ್ ಡೆಮಾಕ್ರೆಟಿಕ್ ಪಕ್ಷದ ಮುಖಂಡ ಚಕ್ ಶುಮರ್ ಜತೆಗೆ ನಡೆಸಿದ ಸಂಧಾನ ಸಭೆ ವಿಫಲವಾದ ಬಳಿಕ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ನಮ್ಮ ಸರ್ಕಾರದ ಬಾಗಿಲು ಮುಚ್ಚಿಸುವುದೇ ಪ್ರತಿಪಕ್ಷಗಳ ಗುರಿ ಎಂದು ಟ್ವೀಟ್ ಮಾಡಿದ್ದಾರೆ. ಸರ್ಕಾರದ ವೆಚ್ಚಕ್ಕಾಗಿ ಬಜೆಟ್ ವಿಧೇಯಕ ಅನುಮೋದನೆಯಾಗುವುದು ಅತಿ ಮುಖ್ಯ. ತೆರಿಗೆ ಕಡಿತ ಮತ್ತು ಆರ್ಥಿಕತೆ ಚೇತರಿಕೆಯ ದಿಟ್ಟ ಕ್ರಮಗಳಿಂದ ಅಮೆರಿಕನ್ನರು ನಮ್ಮ ಸರ್ಕಾರದ ಪರ ವಾಲುತ್ತಿದ್ದಾರೆ. ಇದನ್ನು ಸಹಿಸದ ಪ್ರತಿಪಕ್ಷಗಳು ಸಂಸತ್ ನಲ್ಲಿ ತಡೆ ಒಡ್ಡುತ್ತಿವೆ ಎಂದು ಕಿಡಿಕಾರಿದ್ದಾರೆ.

ಫೆ.16ರವರೆಗೆ ನಿರಾಳ: ರಿಪಬ್ಲಿಕನ್ನರ ಬಹುಮತವಿರುವ ಹೌಸ್ ಆಫ್ ಕಾಮನ್ಸ್​ನಲ್ಲಿ (ಅಮೆರಿಕ ಸಂಸತ್​ನ ಕೆಳಮನೆ) ಈಗಾಗಲೇ ಬಜೆಟ್ ಖರ್ಚುವೆಚ್ಚದ ಮಸೂದೆಗೆ ಅನುಮೋದನೆ ದೊರೆತಿರುವುದರಿಂದ ಫೆ.16ರವರೆಗೆ ಸರ್ಕಾರಕ್ಕೆ ಅವಶ್ಯಕವಾದ ಹಣ ವ್ಯಯಿಸಲು ಅಡ್ಡಿಯಿಲ್ಲ. ಅಲ್ಲಿಯವರೆಗೂ ಸರ್ಕಾರದಿಂದ ತಮ್ಮ ವಿವಿಧ ಬೇಡಿಕೆಗಳನ್ನು ಸಾಧ್ಯವಾದಷ್ಟು ಈಡೇರಿಸಿಕೊಳ್ಳಲು ಪ್ರತಿಪಕ್ಷಗಳು ಮುಂದಾಗುವ ಸುಳಿವು ಸಿಕ್ಕಿದೆ.

ರಿಪಬ್ಲಿಕ್ ಷರತ್ತು

ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ 8 ಲಕ್ಷ ಯುವಕರಿಗೆ (ಡ್ರೀಮರ್ಸ್) ಆಶ್ರಯ ಕಲ್ಪಿಸಿದರಷ್ಟೇ ಸಂಸತ್​ನಲ್ಲಿ ಸರ್ಕಾರದ ಬಜೆಟ್ ವಿಧೇಯಕಕ್ಕೆ ಬೆಂಬಲ ಕೊಡಲಾಗುವುದೆಂಬ ಪ್ರಮುಖ ಷರತ್ತನ್ನು ರಿಪಬ್ಲಿಕನ್ ಪಕ್ಷ ಇರಿಸಿದೆ. ಮಾರ್ಚ್ 5ಕ್ಕೆ ಡ್ರೀಮರ್ಸ್​ಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಲ್ಪಿಸಿದ್ದ ಆಶ್ರಯ ಅವಧಿ ಮುಕ್ತಾಯಗೊಳ್ಳಲಿದ್ದು, ನಂತರ ಗಡಿಪಾರಿಗೆ ಗುರಿಯಾಗುವ ಆತಂಕ ಅವರಲ್ಲಿ ಮನೆಮಾಡಿದೆ.

ವಾರ್ಷಿಕೋತ್ಸವಕ್ಕೆ ತೊಡಕು

ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಮಾರ್-ಅ-ಲಾಗೊದ ಫ್ಲಾರಿಡಾ ಮ್ಯಾನ್ಷನ್​ನಲ್ಲಿ ಟ್ರಂಪ್ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದರು. ಆದರೆ ಡೆಮಾಕ್ರೆಟಿಕ್ ಮುಖಂಡರೊಂದಿಗೆ ಸಂಧಾನ ವಿಫಲವಾಗಿದ್ದರಿಂದ ಪ್ರಯಾಣ ರದ್ದುಗೊಳಿಸಿ ಶ್ವೇತಭವನದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.

ಪರಿಣಾಮಗಳೇನು?

ಕಾನೂನು ಪಾಲನೆ, ರಕ್ಷಣೆ, ವಲಸೆ, ಕೇಂದ್ರೀಯ ಬ್ಯಾಂಕ್, ಆಸ್ಪತ್ರೆ , ವಿಮಾನ ಪ್ರಯಾಣ, ಪಾರ್ಕ್ ಮತ್ತು ಮ್ಯೂಸಿಯಂ, ಪೋಸ್ಟಲ್ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸರ್ಕಾರಿ ಸೇವೆಗಳು ಹಣದ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತ ಕಾಣಲಿವೆ. 8.50 ಲಕ್ಷ ಸರ್ಕಾರಿ ನೌಕರರು ವೇತನ ರಹಿತ ರಜೆ ಮೇಲೆ ಮನೆಯಲ್ಲಿಯೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.

ವಾರಕ್ಕೆ 38,298 ಕೋಟಿ ರೂ.ನಷ್ಟ

2013ರಲ್ಲೂ ಅಮೆರಿಕ ಸರ್ಕಾರ ಹಣಕಾಸು ಕೊರತೆಯಿಂದಾಗಿ 16 ದಿನ ಸ್ಥಗಿತ ಕಂಡಿತ್ತು. ಇದರಿಂದಾಗಿ ಅಮೆರಿಕದ ಆರ್ಥಿಕತೆ -ಠಿ; 1.53 ಲಕ್ಷ ಕೋಟಿ ನಷ್ಟ ಅನುಭವಿಸಿತ್ತು. ಆದರೆ, ಈ ಬಾರಿ ಪ್ರತಿ ವಾರಕ್ಕೆ -ಠಿ; 38,298 ಕೋಟಿ ನಷ್ಟವಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ತುರ್ತು ಸೇವೆಗಳಿಗೆ ಸಂಬಂಧಿತ ವಿದೇಶಗಳೊಂದಿಗಿನ ಒಪ್ಪಂದದ ಮೇಲೆ ಸರ್ಕಾರದ ಹಠಾತ್ ಸ್ಥಗಿತ ಯಾವುದೇ ಪರಿಣಾಮ ಬೀರುವುದಿಲ್ಲ. ಷೇರುಮಾರುಕಟ್ಟೆ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗಳು ಅಬಾಧಿತವಾಗಿರಲಿದೆ ಎಂದು ಶ್ವೇತಭವನ ಹೇಳಿದೆ.

 

ರಾಷ್ಟ್ರೀಯ ಭದ್ರತೆ, ಯೋಧರ ಕುಟುಂಬಗಳು, ದುರ್ಬಲ ಸಮುದಾಯ ಮತ್ತು ಇಡೀ ದೇಶಕ್ಕಿಂತ ರಾಜಕಾರಣವೇ ಮುಖ್ಯ ಎಂದು ಪ್ರತಿಪಕ್ಷಗಳು ಸಂಸತ್​ನಲ್ಲಿ ಸಾಬೀತುಮಾಡಿವೆ. ಸರ್ಕಾರದ ಹಠಾತ್ ಸ್ಥಗಿತವೇ ಅವರಿಗೆ ಪ್ರಮುಖವಾಗಿದೆ.

– ಸರ್ಹಾ ಸ್ಯಾಂಡರ್ಸ್, ಅಮೆರಿಕ ಅಧ್ಯಕ್ಷರ ವಕ್ತಾರೆ

 

ಶಟ್​ಡೌನ್​ನಿಂದ ತ್ರಿಶಂಕುಗಳಾದವರು

7 ಲಕ್ಷ – ಅಮೆರಿಕದಲ್ಲಿ ನೆಲೆಸಿರುವ ದಾಖಲೆರಹಿತ ವಲಸಿಗರ (ಡ್ರೀಮರ್ಸ್) ಭವಿಷ್ಯ ಅತಂತ್ರ

90 ಲಕ್ಷ – ಆರೋಗ್ಯ ವಿಮೆ ಯೋಜನೆ ನೊಂದಾಯಿತರಾಗಿರುವ ಮಕ್ಕಳು

13 ಲಕ್ಷ – ಸೇನಾ ಯೋಧರಿಂದ ವೇತನ ಭರವಸೆಯಿಲ್ಲದೆ ಕೆಲಸ

417 – ರಾಷ್ಟ್ರೀಯ ಪಾರ್ಕ್​ಗಳು ಬಂದ್ ಆಗುವ ಸಾಧ್ಯತೆ

19 – ರಾಷ್ಟ್ರೀಯ ಮ್ಯೂಸಿಯಂಗಳು ತಾತ್ಕಾಲಿಕ ಸ್ಥಗಿತ

 

ಹಿಂದೆಯೂ ಆಗಿತ್ತು 18 ಬಾರಿ ಅಮೆರಿಕ ಶಟ್​ಡೌನ್

ಅವಧಿ**ಅಧ್ಯಕ್ಷ

 1. ಸೆ.30- ಅ.11, 1976**ಗೆರಾಲ್ಡ್ ಫೋರ್ಡ್
 2. ಸೆ.30-ಅ.13,1977**ಜಿಮ್ಮಿ ಕಾರ್ಟರ್
 3. ಅ.31-ನ.9,1977**ಜಿಮ್ಮಿ ಕಾರ್ಟರ್
 4. ನ.30-ಡಿ.9, 1977**ಜಿಮ್ಮಿ ಕಾರ್ಟರ್
 5. ಸೆ. 30-ಅ.18,1978**ಜಿಮ್ಮಿ ಕಾರ್ಟರ್
 6. ಸೆ.30-ಅ.12, 1979**ಜಿಮ್ಮಿ ಕಾರ್ಟರ್
 7. ನ.20-23, 1981**ರೊನಾಲ್ಡ್ ರೇಗನ್
 8. ಸೆ.30-ಅ.2, 1982**ರೊನಾಲ್ಡ್ ರೇಗನ್
 9. ಡಿ.17-21, 1982** ರೊನಾಲ್ಡ್ ರೇಗನ್
 10. ನ.10-14, 1983** ರೊನಾಲ್ಡ್ ರೇಗನ್
 11. ಸೆ.30-ಅ.3, 1984 **ರೊನಾಲ್ಡ್ ರೇಗನ್
 12. ಅ.3-5, 1984 ** ರೊನಾಲ್ಡ್ ರೇಗನ್
 13. ಅ.16-18, 1986**ರೊನಾಲ್ಡ್ ರೇಗನ್
 14. ಡಿ.18-20, 1987**ರೊನಾಲ್ಡ್ ರೇಗನ್
 15. ಅ.5-9, 1990** ಜಾರ್ಜ್.ಡಬ್ಲ್ಯು. ಬುಷ್
 16. ನ.13-19, 1995 ** ಬಿಲ್ ಕ್ಲಿಂಟನ್
 17. ಡಿ.5, 1995-ಜ.6, 1996**ಬಿಲ್ ಕ್ಲಿಂಟನ್
 18. ಅ.1-17, 2013**ಬರಾಕ್ ಒಬಾಮ

 

ಏನಿದು ಪ್ರಕರಣ?

ಆಡಳಿತ ಯಂತ್ರ ನಡೆಯಲು ಅವಶ್ಯಕವಾದ ಬಜೆಟ್ ವಿಧೇಯಕವನ್ನು ಟ್ರಂಪ್ ಸರ್ಕಾರ ಶುಕ್ರವಾರ ಸೆನೆಟ್​ನಲ್ಲಿ ಮಂಡಿಸಿತ್ತು. ವಿಧೇಯಕದ ಪರವಾಗಿ 50 ಮತಗಳು ಚಲಾವಣೆಯಾದರೆ, ಅದರ ವಿರುದ್ಧ 48 ಮತಗಳು ಬಿದ್ದವು. ಒಟ್ಟಾರೆ 60 ಸಂಸದರ ಬೆಂಬಲವಿದ್ದರಷ್ಟೇ ವಿಧೇಯಕದ ಅನುಮೋದನೆ ಸಾಧ್ಯವಿರುವ ಕಾರಣ ಬಿಲ್ ಪಾಸ್ ಆಗಲಿಲ್ಲ. ಪರಿಣಾಮ ಟ್ರಂಪ್ ಸರ್ಕಾರದ ಕೈಗಳನ್ನು ಕಟ್ಟಿಹಾಕಿದಂತಾಗಿದೆ.

ಯಾವುದು ಬಾಧಿತ?

 • ರಕ್ಷಣಾ ಇಲಾಖೆಯಲ್ಲಿ ಪೆಂಟಗಾನ್​ಗಾಗಿ ಕಾರ್ಯನಿರ್ವಹಿಸುವ 7.40 ಲಕ್ಷ ನಾಗರಿಕರು
 • ಆಂತರಿಕ ಕಂದಾಯ ಸೇವೆಗಳು
 • ಸಾಮಾಜಿಕ ಭದ್ರತೆ ಆಡಳಿತ ಇಲಾಖೆ
 • ಗೃಹನಿರ್ವಣ ಮತ್ತು ನಗರಾಭಿವೃದ್ಧಿ
 • ಶಿಕ್ಷಣ ಇಲಾಖೆ ್ಥತ್ತ ಸಚಿವಾಲಯ
 • ಕಾರ್ವಿುಕ ಸಚಿವಾಲಯ
 • ಪರಿಸರ ಸಂರಕ್ಷಣೆ ಸಂಸ್ಥೆಗಳು
 • ತ್ಯಾಜ್ಯ ಮತ್ತು ರಸ್ತೆ ಶುಚಿತ್ವ ಸೇವೆಗಳು, ಸಾರ್ವಜನಿಕ ಗ್ರಂಥಾಲಯಗಳು
 • ಮ್ಯೂಸಿಯಂಗಳಲ್ಲಿ ಕೆಲಸಮಾಡುವ ಸಿಬ್ಬಂದಿ ,ರೋಗಪತ್ತೆ ಮತ್ತು ನಿಯಂತ್ರಣ ವಿಳಂಬ, ಶೇ. 61 ಸಿಬ್ಬಂದಿ ಮನೆಗೆ

 

ಇವು ಅಬಾಧಿತ

 • 1.5 ಲಕ್ಷ ಯೋಧರು, 40 ಸಾವಿರ ಆಂತರಿಕ ಭದ್ರತಾ ಇಲಾಖೆ ಸಿಬ್ಬಂದಿ
 • ಅಬಕಾರಿ ಮತ್ತು ಹೆದ್ದಾರಿ ಗಸ್ತು ಪಡೆ
 • ಪೌರತ್ವ ಮತ್ತು ವಲಸೆ ಸೇವೆಗಳು
 • ಶ್ವೇತಭವನ, ಸಂಸತ್, ನ್ಯಾಯಾಲಯಗಳು, ಸ್ಥಳೀಯ ಆಡಳಿತ
 • ಪೋಸ್ಟಲ್ ಸೇವೆಗಳು
 • ಶಾಲೆ ಮತ್ತು ಸಾರ್ವಜನಿಕ ಸಾರಿಗೆ
 • ವಿಮಾನ ನಿಲ್ದಾಣಗಳು

 

Leave a Reply

Your email address will not be published. Required fields are marked *

Back To Top