ಅಮೆರಿಕ ಪ್ರವೇಶಿಸಲು ಅಕ್ರಮವಾಗಿ ಮೆಕ್ಸಿಕೋ ಪ್ರವೇಶಿಸಿದ್ದ 311 ಭಾರತೀಯರ ಗಡಿಪಾರು

ನವದೆಹಲಿ: ಅಮೆರಿಕ ಪ್ರವೇಶಿಸಲು ಅಕ್ರಮವಾಗಿ ಮೆಕ್ಸಿಕೋ ಪ್ರವೇಶಿಸಿದ್ದ ಮುನ್ನೂರಕ್ಕೂ ಹೆಚ್ಚು ಭಾರತೀಯರನ್ನು ಮೆಕ್ಸಿಕನ್ ಇಮಿಗ್ರೇಷನ್ ಅಧಿಕಾರಿಗಳು ಭಾರತಕ್ಕೆ ಗಡಿಪಾರು ಮಾಡಿದ್ದಾರೆ.

ಉತ್ತಮ ಜೀವನದ ಕನಸುಕಟ್ಟಿಕೊಂಡು ಅಮೆರಿಕ ಪ್ರವೇಶಿಸಲು ಯತ್ನಿಸಿದ್ದ ಎಲ್ಲ 311 ಭಾರತೀಯರು ವಿಶೇಷ ವಿಮಾನದಲ್ಲಿ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಬಂದವರಲ್ಲಿ ಮಹಿಳೆಯೂ ಸೇರಿದ್ದಾಳೆ. ಗಡಿಪಾರಾದವರಲ್ಲಿ ಬಹುತೇಕ ಎಲ್ಲರೂ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸೇರಿದವರೇ ಆಗಿದ್ದಾರೆ.

ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಪನಾಮಾದ ಕಾಡುಮೇಡುಗಳಲ್ಲಿ ಕಾಲ್ನಡಿಗೆ ಮೂಲಕ ಅಮೆರಿಕದ ಗಡಿ ತಲುಪಲು ಮುಂದಾಗಿದ್ದರು. ಅಮೆರಿಕ ಗಡಿ 800 ಕಿಮೀ ದೂರದಲ್ಲಿದ್ದಾಗ ಮೆಕ್ಸಿಕನ್ ಅಧಿಕಾರಿಗಳು ಎಲ್ಲರನ್ನು ಬಂಧಿಸಿ ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ. 

ಮೆಕ್ಸಿಕೋದಿಂದ ಗಡಿಪಾರಾಗಿ ನಿರಂತರ 11 ಗಂಟೆಗಳ ವಿಮಾನ ಪ್ದಾರಯಾಣ ಮೂಲಕ ಬೆಳಗಿನ ಜಾವ 5 ಗಂಟೆಗೆ ದೆಹಲಿ ವಿಮಾನ ನಿಲ್ದಾಣ ತಲುಪಿದೆವು. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿಲ್ದಾಣದಿಂದ ಹೊರಬರಲು ಮಧ್ಯಾಹ್ನ 1 ಗಂಟೆಯಾಯಿತು ಎಂದು ಗಡಿಪಾರಾದವರಲ್ಲಿ ಒಬ್ಬರಾದ ಜಶನ್​ಪ್ರೀತ್ ಸಿಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *