2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಹಿಂದು ಮಹಿಳೆ

ವಾಷಿಂಗ್ಟನ್: ಡೆಮಾಕ್ರಟಿಕ್‌ ಪಕ್ಷದಿಂದ ಹವಾಯಿಗೆ ಅಮೆರಿಕದ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾದ್ ಅವರು 2020ರಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ ಮತ್ತು ಮುಂದಿನ ವಾರದೊಳಗೆ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಗಬ್ಬಾದ್‌ ಅವರು ಇರಾಖ್‌ನ ಯುದ್ಧವನ್ನು ಕಂಡವರಾಗಿದ್ದು, ಸದ್ಯ ವಿದೇಶಾಂಗ ವ್ಯವಹಾರಗಳ ಗೃಹ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮೊದಲ ಅಮೆರಿಕನ್ ಸಮೋವನ್ ಮತ್ತು ಕಾಂಗ್ರೆಸ್‌ನ ಮೊದಲ ಹಿಂದು ಸದಸ್ಯರಾಗಿದ್ದಾರೆ.

ಆರೋಗ್ಯದ ಕಾಳಜಿ, ಅಪರಾಧ ನ್ಯಾಯ ಸುಧಾರಣೆ ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಡೆಮೋಕ್ರಾಟ್ ನಾಯಕಿ ಮಾತನಾಡಿ, “ಈ ತೀರ್ಮಾನಕ್ಕೆ ಬರಲು ನನಗೆ ಹಲವು ಕಾರಣಗಳಿವೆ. ಅಮೆರಿಕದ ಜನರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳ ಕುರಿತು ನಾನು ಕಾಳಜಿ ಹೊಂದಿದ್ದು, ಅವುಗಳನ್ನು ಪರಿಹರಿಸಲು ಸಹಾಯ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಇತರೆ ಆದ್ಯತೆಗಳ ಬಗ್ಗೆ ಮಾತನಾಡುತ್ತಾ, ಶಾಂತಿಯನ್ನು ಕಾಪಾಡುವ ಪ್ರಮುಖ ಸಮಸ್ಯೆಯೊಂದಿದೆ ಮತ್ತು ಅದು ಯುದ್ಧ ಮತ್ತು ಶಾಂತಿಯ ವಿಷಯವಾಗಿದ್ದು, ಈ ಕುರಿತು ತಿಳಿದುಕೊಳ್ಳಲು ಮತ್ತು ನಾವು ಘೋಷಣೆ ಮಾಡಿದ ಬಳಿಕ ಅದರ ಕುರಿತು ಆಳವಾಗಿ ಮಾತನಾಡಲು ಬಯಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *