More

    ಪ್ರಧಾನಿ ಮೋದಿ ಟ್ವೀಟನ್ನು ಯಥಾವತ್ತಾಗಿ ಕಾಪಿ ಮಾಡಿ ಟ್ರೋಲ್​ಗೆ ದಾಳಕ್ಕೆ ಸಿಲುಕಿದ ನಟಿ ಊರ್ವಶಿ ರೌಟೇಲಾ!

    ಮುಂಬೈ: ಶನಿವಾರ ಸಂಜೆ ಕಾರು ಅಪಘಾತದಲ್ಲಿ ಗಾಯಗೊಂಡ ಬಾಲಿವುಡ್​ ಹಿರಿಯ ನಟಿ ಶಬಾನಾ ಅಜ್ಮಿ ಅವರು ಬೇಗ ಗುಣಮುಖರಾಗಲೆಂದು ಟ್ವೀಟ್​ ಮಾಡಿ ನಟಿ ಊರ್ವಶಿ ರೌಟೇಲಾ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

    ಅರೇ.. ಊರ್ವಶಿಯವರನ್ನು ಟೀಕಿಸುವಂತಹ ತಪ್ಪೇನು ಮಾಡಿದರು? ಟ್ವೀಟ್​ ಮೂಲಕ ಪ್ರಾರ್ಥಿಸಿದ್ದೇ ತಪ್ಪಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಟ್ವೀಟ್​ ಮಾಡಿರುವ ಊರ್ವಶಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಅದೇನೆಂದರೆ ಪ್ರಧಾನಿ ಮೋದಿ ಮಾಡಿರುವ ಟ್ವೀಟ್​ ಅನ್ನೇ ಯಥಾವತ್ತಾಗಿ ನಕಲು ಮಾಡಿದ್ದಾರೆ.

    ಶಬಾನಾ ಅಜ್ಮಿ ಅವರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆಂಬ ಸುದ್ದಿ ಆತಂಕಕ್ಕೆ ದೂಡಿದೆ. ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಊರ್ವಶಿ ಕೂಡ ಯಥಾವತ್ತಾಗಿ ಟ್ವೀಟ್​ ಕಾಪಿ ಮಾಡಿ ಪೇಸ್ಟ್​ ಮಾಡಿದ್ದಾರೆ.

    ಇದನ್ನು ಗಮನಿಸಿರುವ ನೆಟ್ಟಿಗರು ಎರಡು ಟ್ವೀಟ್​ಗಳ ಸ್ಕ್ರೀನ್​ಶಾಟ್​ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸುಲಭವಾಗಿ ಪ್ರಧಾನಿ ಮೋದಿ ಅವರ ಟ್ವೀಟ್​ ಅನ್ನು ಕಾಪಿ, ಪೇಸ್ಟ್​ ಮಾಡಿದ್ದಾರೆ ಎಂದು ಊರ್ವಶಿ ಕಾಲೆಳೆದಿದ್ದಾರೆ. (ಏಜೆನ್ಸೀಸ್​)

    ಪ್ರಧಾನಿ ಮೋದಿ ಟ್ವೀಟನ್ನು ಯಥಾವತ್ತಾಗಿ ಕಾಪಿ ಮಾಡಿ ಟ್ರೋಲ್​ಗೆ ದಾಳಕ್ಕೆ ಸಿಲುಕಿದ ನಟಿ ಊರ್ವಶಿ ರೌಟೇಲಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts