ಮಗು ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಕ್ಕೆ ಚಾಕುವಿನಿಂದ ಬರೆ !

ಮೈಸೂರು: ಮೂರು ವರ್ಷದ ಮಗು ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿತೆಂದು ಸಹಾಯಕಿ ಚಾಕು ಕಾಯಿಸಿ ಬರೆ ಹಾಕಿ ಅಮಾನವೀಯತೆ ತೋರಿದ ಘಟನೆ ನಡೆದಿದೆ.

ದೇವಯ್ಯನಹುಂಡಿ ಅಂಗನವಾಡಿಗೆ ಹೋಗುತ್ತಿದ್ದ ಮೂರು ವರ್ಷದ ಮಗು ಅಲ್ಲಿಯೇ ಮೂತ್ರವಿಸರ್ಜನೆ ಮಾಡಿಕೊಂಡಿದೆ. ಅದನ್ನು ನೋಡಿ ಸಿಟ್ಟಿಗೆದ್ದ ಸಹಾಯಕಿ ನೀಲಮ್ಮ ಗ್ಯಾಸ್​ ಸ್ಟೌನಿಂದ ಚಾಕು ಕಾಯಿಸಿ ಮಗುವಿನ ಕಾಲಿಗೆ ಬರೆ ಹಾಕಿದ್ದಾರೆ ಎಂದು ಆರೋಪಿಸಿರುವ ಮಗುವಿನ ಪಾಲಕರು, ಗ್ರಾಮಸ್ಥರು ಅಂಗನವಾಡಿಯೆದುರು ಪ್ರತಿಭಟನೆ ನಡೆಸಿದ್ದಾರೆ.

ಆದರೆ ಸಹಾಯಕಿ ನೀಲಮ್ಮ ಈ ಆರೋಪವನ್ನು ಅಲ್ಲಗಳೆದಿದ್ದಾರೆ.