Video | ಯುಪಿಯಲ್ಲಿ ಪತ್ರಕರ್ತನ ಮೇಲೆ ಮತ್ತೆ ಹಲ್ಲೆ; ಬಾಯಿಗೆ ಮೂತ್ರ ಮಾಡಿದರೇ ರೈಲ್ವೆ ಪೊಲೀಸರು?

ಶಾಮಿಲ್‌: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡಿದ ಆರೋಪದ ಮೇಲೆ ಬಂಧನವಾಗಿದ್ದ ಪತ್ರಕರ್ತ ಪ್ರಶಾಂತ್ ಕನೂಜಿಯಾ ಬಿಡುಗಡೆಗೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದ್ದು, ಪತ್ರಕರ್ತನು ಕೊಲೆಯನ್ನೇನು ಮಾಡಿಲ್ಲ ಹಾಗಾಗಿ ಬಿಡುಗಡೆ ಮಾಡಿ ಎಂದು ಆದೇಶಿಸದ ಬೆನ್ನಲ್ಲೇ ನಿನ್ನೆಯಷ್ಟೇ ಧಾಮನಪುರ ಸಮೀಪ ರೈಲು ಹಳಿ ತಪ್ಪಿದ್ದ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು ಹಲ್ಲೆ ನಡೆಸಿದ್ದು, ಚೆನ್ನಾಗಿ ಥಳಿಸಿದ್ದಾರೆ.

ಹಲ್ಲೆಗೊಳಗಾದ ಪತ್ರಕರ್ತನನ್ನು ನ್ಯೂಸ್‌ 24ನ ಅಮಿತ್‌ ಶರ್ಮಾ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿದ್ದ ಜಿಆರ್‌ಪಿ ಸಿಬ್ಬಂದಿಯು ಪತ್ರಕರ್ತನನ್ನು ನಿಂದಿಸಿ, ಒದ್ದಿದ್ದಾರೆ.

ನಾನು ಅವರ ಮಧ್ಯೆ ಸಿಕ್ಕಿಹಾಕಿಕೊಂಡೆ. ಆ ವೇಳೆ ನನ್ನ ಬಟ್ಟೆ ಬಿಚ್ಚಿಸಿ ನನ್ನ ಬಾಯಿಗೆ ಮೂತ್ರವನ್ನು ಮಾಡಿದರು ಎಂದು ಶರ್ಮಾ ದೂರಿದ್ದಾರೆ.

ಪತ್ರಕರ್ತನನ್ನು ಬಂಧಿಸಿರುವ ವಿಷಯ ತಿಳಿದು ಪೊಲೀಸ್‌ ಠಾಣೆಗೆ ಹಲವಾರು ಪತ್ರಕರ್ತರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಮಿತ್‌ ಶರ್ಮಾಗೆ ಹೊಡೆಯುತ್ತಿರುವ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್‌ ಆಗಿದೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸ್ಟೇಷನ್‌ ಹೌಸ್‌ ಆಫೀಸರ್‌ ರಾಕೇಶ್‌ ಕುಮಾರ್‌ ಮತ್ತು ಜಿಆರ್‌ಪಿ ಪೇದೆ ಸುನೀಲ್‌ ಕುಮಾರ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಪತ್ರಕರ್ತನನ್ನು ಬಿಡುಗಡೆ ಮಾಡಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *