ಸ್ಪೀಕರ್​ಗೆ ನ್ಯಾಯಾಲಯಕ್ಕಿಂತ ಹೆಚ್ಚಿನ ಅಧಿಕಾರವಿದೆ, ರಾಜೀನಾಮೆ ನಿರ್ಧಾರ ಅಧಿಕಾರ ಸ್ಪೀಕರ್​ಗಿದೆ: ಉಗ್ರಪ್ಪ

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಯಾರೇ ರಾಜೀನಾಮೆ ನೀಡಿದರೂ ಸರ್ಕಾರ ಮುಂದುವರಿಯಲಿದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್​​ ಮುಖಂಡ ವಿ.ಎಸ್​​​ ಉಗ್ರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರದ ಅಸ್ಥಿರತೆಯ ಬಗ್ಗೆ ಮಾತನಾಡಿದ ಅವರು ಸಂವಿಧಾನದ 190ನೇ ವಿಧಿ ಪ್ರಕಾರ ಶಾಸಕರು ರಾಜೀನಾಮೆ ಕೊಟ್ಟಲ್ಲಿ. 1985ರಲ್ಲಿ ದಿನೇಶ್ ಗೋಸ್ವಾಮಿ ಅವರ ವರದಿ ಅಧಾರದ ಮೇಲೆ ರಾಜೀನಾಮೆಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಸ್ಪೀಕರ್​ಗಿದೆ. ಟೆನ್​​ ಶೆಡ್ಯೂಲ್​​​ 7ರ ಪ್ರಕಾರ ಸ್ಪೀಕರ್​ ಅವರೇ ಇಂತಹ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು. ಇಂತಹ ವಿಷಯಗಳಲ್ಲಿ ಅವರಿಗೆ ನ್ಯಾಯಾಲಯಗಿಂತ ಹೆಚ್ಚಿನ ಅಧಿಕಾರವಿದೆ ಎಂದು ಸ್ಪೀಕರ್​ ಅಧಿಕಾರವನ್ನು ಸಂವಿಧಾನ ಪ್ರಕಾರ ಉಗ್ರಪ್ಪ ವಿವರಿಸಿದ್ದಾರೆ.

ಶಾಸಕರು ಇಂದು ಸಂಜೆ 6 ಗಂಟೆಯೊಳಗೆ ರಾಜೀನಾಮೆಯನ್ನು ಕ್ರಮಬದ್ಧವಾಗಿ ಸಲ್ಲಿಸಬೇಕು ಎಂದು ಸ್ಪೀಕರ್​ ಈಗಾಗಲೇ ತಿಳಿಸಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್​​)

One Reply to “ಸ್ಪೀಕರ್​ಗೆ ನ್ಯಾಯಾಲಯಕ್ಕಿಂತ ಹೆಚ್ಚಿನ ಅಧಿಕಾರವಿದೆ, ರಾಜೀನಾಮೆ ನಿರ್ಧಾರ ಅಧಿಕಾರ ಸ್ಪೀಕರ್​ಗಿದೆ: ಉಗ್ರಪ್ಪ”

  1. Mr Ugrappa, you are talking about the constitution body where yourself have not done constitutional duties by not casting your vote. You don’t have any right to comment or question at this position.

Leave a Reply

Your email address will not be published. Required fields are marked *