ಪ್ರೇಯಸಿಗೆ ಕೆಲಸ ಸಿಕ್ಕಿದ್ದಕ್ಕೆ ಕೋಪಗೊಂಡು ಕುತ್ತಿಗೆಯನ್ನೇ ಸೀಳಿಕೊಂಡ ಪ್ರಿಯಕರ

ಘಾಜಿಯಾಬಾದ್ (ಉತ್ತರಪ್ರದೇಶ): ಕೆಲಸಕ್ಕೆ ಹೋಗುವುದು ಬೇಡ ಎಂದು ವಿರೋಧಿಸಿದ್ದರೂ ಪ್ರಿಯಕರನ ಮಾತು ಮೀರಿ ಕೆಲಸ ಪಡೆದಿದ್ದ ಪ್ರಿಯತಮೆಯ ನಡೆಗೆ ಕೋಪಗೊಂಡ ಯುವಕ ತನ್ನ ಕುತ್ತಿಗೆಯನ್ನು ಸೀಳಿಕೊಂಡಿದ್ದಾನೆ.

ತನ್ನ ಪ್ರೇಯಸಿಯನ್ನು ಭೇಟಿ ಮಾಡಿ ಮನೆಗೆ ಬಂದ ರವಿ ಮಲಗಿದ್ದ ತನ್ನ ತಂದೆಯನ್ನು ಎಬ್ಬಿಸಿ ‘ಗುಡ್​ ಬೈ’ ಎಂದು ಕುಸಿದು ಬಿದ್ದಿದ್ದಾನೆ. ಮಾರ್ಗ ಮಧ್ಯೆಯೇ ಕತ್ತು ಸೀಳಿಕೊಂಡು ಬಂದಿದ್ದ ರವಿಯನ್ನು ತಂದೆ ನೊಯಿಡಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿರುವುದು ತಿಳಿದು ಬಂದಿದೆ .

ರವಿ ಮನೆಗೆ ಬಂದ ಐದು ನಿಮಿಷಗಳಲ್ಲಿಯೇ ಆತನ ಪ್ರೇಯಸಿಯೂ ನಮ್ಮ ಮನೆಗೆ ಬಂದಳು ಎಂದು ರವಿ ತಂದೆ ರಾಜು ತಿಳಿಸಿದ್ದಾರೆ. ಖೋಡಾದ ಅನಿಲ್​ ವಿಹಾರ್ ನಿವಾಸಿಯಾಗಿದ್ದ ರವಿ ಫುಡ್​ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ನನ್ನ ಮಗ ಮತ್ತು ಆತನ ಪ್ರೇಯಸಿ ಚೆನ್ನಾಗಿಯೇ ಇದ್ದರು. ಆದರೆ ನಾಲ್ಕೈದು ದಿನಗಳಿಂದ ಬಹಳ ಜಗಳವಾಡಿಕೊಂಡಿದ್ದಾರೆ. ಆಕೆಗೆ ಕೆಲಸ ಸಿಕ್ಕಿದ್ದು ರವಿಗೆ ಇಷ್ಟವಿರಲಿಲ್ಲ. ಇದೇ ವಿಷಯಕ್ಕೆ ಆತ ಬೇಸರದಲ್ಲಿದ್ದ ಎಂದು ರಾಜು ತಿಳಿಸಿದ್ದಾರೆ.(ಏಜೆನ್ಸೀಸ್)