40 ರೂಪಾಯಿಗಾಗಿ 14 ವರ್ಷದ ಅವಳಿ ಸೋದರನ ಕೊಲೆ

ನವದೆಹಲಿ: ಕೇವಲ 40 ರೂಪಾಯಿಗಾಗಿ ಅವಳಿ ಸೋದರರ ನಡುವೆ ನಡೆದ ಜಗಳದಲ್ಲಿ 14 ವರ್ಷದ ಬಾಲಕ ತನ್ನ ಸೋದರನನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಇಬ್ಬರ ನಡುವೆ ಹಣದ ವಿಚಾರವಾಗಿ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಮರುದಿನ ಕಿರಿಯ ಸೋದರ ಅಣ್ಣನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಸೋದರ ಮನೆಗೆ ಬಂದ ಬಳಿಕ ಊಟ ಮಾಡಿ ಮಲಗಿಕೊಂಡಿದ್ದಾನೆ. ಹಿಂದಿನ ದಿನ ನಡೆದ ಜಗಳದಿಂದ ಕೋಪಗೊಂಡಿದ್ದ ಕಿರಿಯ ಸೋದರ ಸುತ್ತಿಗೆಯಿಂದ ಸೋದರನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಸೋದರನಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ತನ್ನ ಸ್ನೇಹಿತರರಿಂದ ಸಿಗುತ್ತಿದ್ದ ಉಪಚಾರಕ್ಕೆ ಬೇಸರವಾಗಿತ್ತು. ಸ್ನೇಹಿತರಿಂದಲೇ ತನಗಿಂತಲೂ ತನ್ನ ಅಣ್ಣ ಜನಪ್ರಿಯ ಮತ್ತು ಹೆಚ್ಚಿನ ಗೌರವ ಪಡೆಯುತ್ತಿದ್ದರಿಂದಾಗಿ ಅವಮಾನಕ್ಕೊಳಗಾಗಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಹಣದ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳವು ಹಿರಿಯ ಸೋದರನ ಹತ್ಯೆಯಲ್ಲಿ ಅಂತ್ಯವಾಗಿದೆ. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)