ಯುಪಿಎಸ್​ಸಿ ವೆಬ್​​ಸೈಟ್​ ಹ್ಯಾಕ್​ !

ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗದ ವೆಬ್​​ಸೈಟ್​ ಹ್ಯಾಕ್​ ಆಗಿದ್ದು, ವೆಬ್​​ಸೈಟ್​​ ಹ್ಯಾಕ್​ ಮಾಡಿರುವ ದುಷ್ಕರ್ಮಿಗಳು, ಮುಖಪುಟದಲ್ಲಿ ಜನಪ್ರಿಯ ಜಪಾನಿ ಕಾರ್ಟೂನ್ ಡೋರೇಮಾನ್ ಚಿತ್ರ ಹಾಕಿದ್ದಾರೆ.

ಸೋಮವಾರ ರಾತ್ರಿ ಈ ಕೃತ್ಯ ಎಸಗಿರುವ ದುಷ್ಕರ್ಮಿಗಳು, ಯುಪಿಎಸ್​ಸಿ ವೆಬ್​ಸೈಟ್​ ಹೋಮ್​ಪೇಜ್​ನಲ್ಲಿ ಪಿಕ್ ಅಪ್ ದಿ ಕಾಲ್ ಮತ್ತು ಐ ಆ್ಯಮ್ ಸ್ಟುಪಿಡ್ ಎಂಬ ಸಾಲುಗಳನ್ನು ಬರೆದು ಹಿಂದಿಯಲ್ಲಿರುವ ಡೋರೇಮಾನ್​​ ಟೈಟಲ್​​ ಸಾಂಗ್​​ ಫ್ಲೇ ಆಗುವಂತೆ ಮಾಡಿದ್ದರು.

ವೆಬ್​ಸೈಟ್​ ಹ್ಯಾಕ್​ ಆಗಿದ್ದ ವಿಷಯ ತಿಳಿದ ಬಳಕೆದಾರರು ಸ್ಕ್ರೀನ್​ಶಾಟ್​ನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲು ಆರಂಭಿಸಿದರು. ನಂತರ ಎಚ್ಚೆತ್ತುಕೊಂಡ ಯುಪಿಎಸ್​ಸಿ ಇಂದು ಬೆಳಗ್ಗೆ ಕೆಲ ಗಂಟೆ ವೆಬ್​ಸೈಟ್​ನ್ನು ಸ್ಥಗಿತಗೊಳಿಸಿದ್ದರು. (ಏಜೆನ್ಸೀಸ್​)