More

    ಯುಪಿಎಸ್​ಸಿ 2024ರ ನೇಮಕಾತಿ | ಪರೀಕ್ಷೆ ದಿನಾಂಕ ಹಾಗೂ ವೇಳಾಪಟ್ಟಿ ಇಲ್ಲಿದೆ…

    ದೆಹಲಿ: ಯುಪಿಎಸ್​ಸಿಯ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಆಯೋಗವು ಮಹತ್ವದ ಸೂಚನೆಯನ್ನು ನೀಡಿದೆ. ಯುಪಿಎಸ್​ಸಿ 2024ರಲ್ಲಿ ನಡೆಯುವ ಎಲ್ಲ ಪರೀಕ್ಷೆಗಳ ದಿನಾಂಕಗಳನ್ನು ಅಧಿಕೃತ ವೆಬ್‌ಸೈಟ್​​​ನಲ್ಲಿ ಪ್ರಕಟಿಸಿದೆ. ಇದನ್ನು ಅಧಿಕೃತ ವೆಬ್‌ಸೈಟ್​​​ನಲ್ಲಿ ಪರಿಶೀಲಿಸಬಹುದಾಗಿದೆ.

    ಆಯೋಗವು ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ(CSE) ಮತ್ತು ಭಾರತೀಯ ಅರಣ್ಯ ಸೇವೆಯ ಪ್ರಾಥಮಿಕ ಪರೀಕ್ಷೆ (IFS), ಎನ್​ಡಿಎ ಪರೀಕ್ಷೆ, ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ(TCMS), ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಯಂತಹ ಹಲವಾರು ನೇಮಕಾತಿಗಳಿಗೆ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಮದ್ಯ ಖರೀದಿಗೆ ಮುಗಿಬಿದ್ದ ಜನರು

    NDA, NA ಮತ್ತು CDS ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 1, 2024 ರಂದು ನಿಗದಿಪಡಿಸಲಾಗಿದೆ. ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ ಮೇ 26, 2024ರಂದು ನಡೆಯಲಿದೆ. ಹಾಗೂ ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 20ರಂದು ನಿಗದಿಪಡಿಸಲಾಗಿದೆ.

    ಅಭ್ಯರ್ಥಿಗಳು ಪರೀಕ್ಷೆಯ ದಿನಾಂಕ, ಅಧಿಸೂಚನೆ ದಿನಾಂಕ ಮತ್ತು ಇತರ ಯುಪಿಎಸ್​ಸಿ ನೇಮಕಾತಿಗಾಗಿ ಅಪ್ಲಿಕೇಶನ್ ದಿನಾಂಕಗಳನ್ನು ಈ ಸೂಚನೆಯಲ್ಲಿ ಪರಿಶೀಲಿಸಬಹುದಾಗಿದೆ. ಈ ದಿನಾಂಕಗಳನ್ನು ಯಾವುದೇ ಸಂದರ್ಭಗಳಲ್ಲಿ ಬದಲಾಯಿಸಬಹುದು ಎಂಬುದನ್ನು ಎಲ್ಲರೂ ಗಮನಿಸಬೇಕು. ಸದ್ಯಕ್ಕೆ ಇವು ನಿಗದಿತ ದಿನಾಂಕಗಳಾಗಿವೆ.

    ಯುಪಿಎಸ್​ಸಿ ಕ್ಯಾಲೆಂಡರ್ 2024 ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?
    upsc.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ UPSC-2024ರ ವಾರ್ಷಿಕ ಕ್ಯಾಲೆಂಡರ್​ಗಾಗಿ ಲಭ್ಯವಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. 2024ರ ಯುಪಿಎಸ್​ಸಿ ಪರೀಕ್ಷೆಗಳ ವೇಳಾಪಟ್ಟಿ ಪಿಡಿಎಫ್​​ ನಿಮ್ಮ ಪರದೆಯ ಮೇಲೆ ತೆರೆಯುತ್ತದೆ. ಇಲ್ಲಿ ಎಲ್ಲ ಪರೀಕ್ಷೆಗಳ ದಿನಾಂಕ ಪರಿಶೀಲಿಸಬಹುದಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts