ಶಿಕಾರಿಪುರ: ಬ್ರಾಹ್ಮಣ ಸಮಾಜವು ಧರ್ಮೋತ್ಥಾನ ಹಾಗೂ ಲೋಕಹಿತ ಕಾರ್ಯಗಳಿಗೆ ಸಮರ್ಪಿಸಿಕೊಂಡಿದೆ ಎಂದು ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನಟರಾಜ ಭಾಗವತ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿಪ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಾಚರಣೆಗೆ ನಾವು ಮೊದಲ ಆದ್ಯತೆ ನೀಡಬೇಕು. ಎಷ್ಟೇ ಕಷ್ಟಗಳು ಬಂದರೂ ಧರ್ಮ ಮಾರ್ಗದಿಂದ ವಿಮುಖರಾಗಬಾರದು. ಧರ್ಮ ಮಾರ್ಗ ಎಂದರೆ ದೇವಮಾರ್ಗ. ನಾವು ಆರಾಧನೆ, ಸ್ಮರಣೆ, ಜಪತಪಾದಿಗಳಿಂದ ಸಮಾಜೋತ್ಥಾನ ಮಾಡುತ್ತ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಸಂಪ್ರದಾಯ ಮತ್ತು ಆಚರಣೆಗಳನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಮಾಜದ ಹಿರಿಯರಾದ ಬಿ.ಎಸ್.ರಾಮಸ್ವಾಮಿ ಹಾಗೂ ಚಿಕ್ಕಾ ಜೋಯ್ಸ ಅವರನ್ನು ಸನ್ಮಾನಿಸಲಾಯಿತು. ನವರಾತ್ರಿ ಪ್ರಯುಕ್ತ ದುರ್ಗಾ ಹೋಮ, ಕೌಮಾರಿ ಪೂಜೆ, ಲಲಿತಾ ಸಹಸ್ರನಾಮ ಪಠಣ ನಡೆಯಿತು. ಸುಷ್ಮಾ ದೀಕ್ಷಿತ್ ತಂಡದವರು ದೇವರನಾಮ, ಭರತನಾಟ್ಯ ನಡೆಸಿಕೊಟ್ಟರು. ರವಿಕುಮಾರ್, ಸೀತಾರಾಮ ರಾಯರು, ಕಾಳಿಂಗ ರಾವ್, ಮಹೇಶ್ ಪಾಟೀಲ್, ಗಣಪತಿ ಭಟ್, ಸತೀಶ್, ಅಂಜು ಭಟ್, ಹರೀಶ್ ಜೋಯ್ಸ, ಹಿರಣ್ಮ ಯಿ, ಹರೀಶ್ ಜೋಯ್ಸ, ರಾಘವೇಂದ್ರ ತಡಗಣಿ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.