ಬೆಂಗಳೂರು: ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರ ನೆರವಿಗೆ ಇದೀಗ ಯಶ್ ಬಂದಿದ್ದಾರೆ. ಚಿತ್ರರಂಗದ ಸುಮಾರು ಮೂರು ಸಾವಿರ ಕಾರ್ಮಿಕರ ಖಾತೆಗಳಿಗೆ ತಲಾ ಐದು ಸಾವಿರ ರೂ.ಗಳನ್ನು ಹಾಕುವುದಕ್ಕೆ ಅವರು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಜತೆಗೆ ಯಶ್ ಚರ್ಚಿಸಿದ್ದು, ವಿವರಗಳು ತಲುಪಿದ ತಕ್ಷಣವೇ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಭರವಸೆಯ ಒಂದು ಬೆಳಕು … ಕರೊನಾ ವಾರಿಯರ್ಸ್ಗೆ ಹಾಡಿನ ಮೂಲಕ ಗೌರವ
ಪ್ರಮುಖವಾಗಿ, ಯಶ್ ಅವರ ಈ ನಡೆಯನ್ನು ಬಹಳ ಮಹತ್ವದ್ದು ಎಂದು ಉಪೇಂದ್ರ ಬಣ್ಣಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಧನ್ಯವಾದಗಳು ಯಶ್. ಇಂತಹ ಮತ್ತಷ್ಟು ಮಹತ್ಕಾರ್ಯಗಳು ತಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ’ ಎಂದು ಮೆಚ್ಚಿಕೊಂಡಿದ್ದಾರೆ.
ಇನ್ನು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಸಹ ಯಶ್ ಮಾಡುತ್ತಿರುವ ಸಹಾಯ ಶ್ಲಾಘನೀಯ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಅವರು, ಯಶ್ಗೆ ಸಮಸ್ತ ಚಿತ್ರರಂಗದ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸೆಕ್ಸ್ ಸೀನ್ ಶೂಟಿಂಗೂ ಮುನ್ನ ರಾಧಿಕಾ ಆಪ್ಟೆ ಜತೆ ನಡೆದ ರಹಸ್ಯ ಮಾತುಕತೆ ಬಿಚ್ಚಿಟ್ಟ ನಟ!
ಬರೀ ಉಪೇಂದ್ರ ಮತ್ತು ಸಾ.ರಾ. ಗೋವಿಂದು ಮಾತ್ರವಲ್ಲ, ಎ.ಪಿ. ಅರ್ಜುನ್, ಪವನ್ ಒಡೆಯರ್, ತರುಣ್ ಸುಧೀರ್ ಸೇರಿದಂತೆ ಚಿತ್ರರಂಗದ ಹಲವರು, ಕಾರ್ಮಿಕರಿಗೆ 1.5 ಕೋಟಿ ರೂ.ಗಳನ್ನು ಕೊಟ್ಟಿರುವ ಯಶ್ ನಡೆಯನ್ನು ಸ್ವಾಗತಿಸಿದ್ದಾರೆ.