ಪ್ರಿಯಾಂಕಾ ಉಗ್ರಾವತಾರಕ್ಕೆ ಉಪೇಂದ್ರ ಫಿದಾ ; ಪ್ಯಾನ್​ ಇಂಡಿಯಾ ಮೂಡಿಬರಲಿದೆ ನೈಜ ಘಟನೆಗಳ ಕುರಿತ ಚಿತ್ರ

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಸಾಮಾನ್ಯವಾಗಿ ಸ್ಟಾರ್​ ಹೀರೋಗಳ ಸಿನಿಮಾಗಳು ಬಹುಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಬಿಡುಗಡೆಯಾಗುತ್ತಿರುತ್ತವೆ. ಆದರೆ, ನಾಯಕಿಪ್ರಧಾನ ಚಿತ್ರಗಳು ಕನ್ನಡದಿಂದ ಪ್ಯಾನ್​ ಇಂಡಿಯಾ ಹೋಗಿರುವುದು ಅಪರೂಪ. ಇದೀಗ ಆ ಅಪರೂಪದ ನಟಿಯರ ಸಾಲಿಗೆ ಪ್ರಿಯಾಂಕಾ ಉಪೇಂದ್ರ ಕೂಡ ಸೇರಿದ್ದಾರೆ. ಅವರು ನಟಿಸಿರುವ “ಉಗ್ರಾವತಾರ’ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ರಿಲೀಸ್​ ಆಗಲಿದೆ.

ಪ್ರಿಯಾಂಕಾ ಉಗ್ರಾವತಾರಕ್ಕೆ ಉಪೇಂದ್ರ ಫಿದಾ ; ಪ್ಯಾನ್​ ಇಂಡಿಯಾ ಮೂಡಿಬರಲಿದೆ ನೈಜ ಘಟನೆಗಳ ಕುರಿತ ಚಿತ್ರ
ಪ್ರಿಯಾಂಕಾ ಉಗ್ರಾವತಾರಕ್ಕೆ ಉಪೇಂದ್ರ ಫಿದಾ ; ಪ್ಯಾನ್​ ಇಂಡಿಯಾ ಮೂಡಿಬರಲಿದೆ ನೈಜ ಘಟನೆಗಳ ಕುರಿತ ಚಿತ್ರ 3

ಇತ್ತೀಚೆಗಷ್ಟೆ ಪತ್ನಿಯ ಚಿತ್ರದ ಟ್ರೇಲರ್​ ರಿಲೀಸ್​ ಮಾಡಿದ ನಟ ಉಪೇಂದ್ರ, “ಟ್ರೇಲರ್​ನಲ್ಲಿ ನಿರ್ದೇಶಕರ ಶ್ರಮ ಕಾಣುತ್ತದೆ. ಆದರೂ ಅವರು ಸ್ವಲ್ಪ ಆತಂಕದಲ್ಲಿದ್ದಾರೆ. ಮೊದಲ ಬಾರಿ ಸಿನಿಮಾ ಮಾಡಿದಾಗ ನನಗೂ ಅದೇ ಆಗಿತ್ತು. ಮನೆಯಲ್ಲಿ ಉಗ್ರಾವತಾರವನ್ನು ನಾನು ನೋಡಿದ್ದೇನೆ. ಮುಂದೆ ನೀವೂ ನೋಡುತ್ತೀರ. ಆದರೆ, ಲೇಡಿ ಪೊಲೀಸರು ಗ್ಲಾಮರಸ್​ ಆಗಿ ಕಾಣಬಾರದು ಅನ್ನೋದೊಂದೇ ನನ್ನ ಆಕ್ಷೇಪ. ಹಾಗೆ ಕಂಡರೆ ರೌಡಿಗಳನ್ನು ಹೇಗೆ ಮಟ್ಟ ಹಾಕೋಕೆ ಸಾಧ್ಯ’ ಎಂದು ನಗುತ್ತಾ, ನಗಿಸುತ್ತಾ ಚಿತ್ರತಂಡಕ್ಕೆ ಶುಭಹಾರೈಸಿದರು. ನಾಯಕಿ ಪ್ರಿಯಾಂಕಾ ಉಪೇಂದ್ರ, “ಕಥೆ ಕೇಳಿದಾಗ ಈ ಪಾತ್ರ ನನ್ನಿಂದ ಮಾಡಲು ಸಾಧ್ಯನಾ ಎಂಬ ಪ್ರಶ್ನೆ ಕಾಡಿತ್ತು. ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಸ್ವಯಂರಕ್ಷಣೆ, ಸುರಾ ಆ್ಯಪ್​, ಪೊಲೀಸರಿಗೂ ಗೌರವ ಕೊಡಬೇಕು ಎಂಬ ಹಲವು ಅಂಶಗಳು ಚಿತ್ರದಲ್ಲಿವೆ’ ಎಂದರು.

ಪ್ರಿಯಾಂಕಾ ಉಗ್ರಾವತಾರಕ್ಕೆ ಉಪೇಂದ್ರ ಫಿದಾ ; ಪ್ಯಾನ್​ ಇಂಡಿಯಾ ಮೂಡಿಬರಲಿದೆ ನೈಜ ಘಟನೆಗಳ ಕುರಿತ ಚಿತ್ರ
ಪ್ರಿಯಾಂಕಾ ಉಗ್ರಾವತಾರಕ್ಕೆ ಉಪೇಂದ್ರ ಫಿದಾ ; ಪ್ಯಾನ್​ ಇಂಡಿಯಾ ಮೂಡಿಬರಲಿದೆ ನೈಜ ಘಟನೆಗಳ ಕುರಿತ ಚಿತ್ರ 4

ನಿರ್ದೇಶಕ ಗುರುಮೂರ್ತಿ, “ನಮ್ಮ ಸುತ್ತಮುತ್ತಲೂ ನಡೆದ ಕೆಲ ನೈಜ ಟನೆಗಳನ್ನು ಸೇರಿಸಿ ಈ ಸಿನಿಮಾ ಮಾಡಿದ್ದೇನೆ. ಪ್ರಿಯಾಂಕಾ ಅವರು ಈ ಚಿತ್ರದಿಂದ ಆ್ಯಕ್ಷನ್​ ಕ್ವೀನ್​ ಆಗಿದ್ದಾರೆ. ಐದು ಸಾಹಸ ಸನ್ನಿವೇಶಗಳಿದ್ದು, ಎಲ್ಲವೂ ವಿಭಿನ್ನವಾಗಿವೆ. ಅದಕ್ಕಾಗಿ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಈಗಾಗಲೇ ನಾಲ್ಕು ಭಾಷೆಗಳಲ್ಲಿ ಚಿತ್ರದ ಡಬ್ಬಿಂಗ್​ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.

Share This Article

ಚಳಿಗಾಲ ಶುರುವಾಗ್ತಿದೆ ಜೇನುತುಪ್ಪ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮತ್ರ ಸುಳಿಯೋದೇ ಇಲ್ಲ! Honey in Winter

Honey in Winter : ಚಳಿಗಾಲ ಇನ್ನೇನು ಶುರುವಾಗಲಿದೆ. ಈ ಚಳಿಗಾಲ ನಮ್ಮ ಚರ್ಮಕ್ಕೆ ತುಂಬಾನೇ…

ಇಲ್ಲಿದೆ ಜೀವನದ ಗುಟ್ಟು… ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

ನಿಮ್ಮ ಅಂಗೈನಲ್ಲಿ ಈ ಗುರುತು ಇದೆಯಾ ಒಮ್ಮೆ ನೋಡಿ… ಇದ್ರೆ ನಿಮ್ಮಂಥ ಅದೃಷ್ಟವಂತ ಯಾರೂ ಇಲ್ಲ! Palmistry

Palmistry : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ