ಸ್ಮಾರ್ಟ್​ಫೋನ್ ಹ್ಯಾಕ್ ಆದೀತು ಜೋಕೆ: ವಾಟ್ಸ್​ಆಪ್ ಅಪ್​ಡೇಟ್​ಗೆ ಸೂಚನೆ

ಸ್ಯಾನ್​ಫ್ರಾನ್ಸಿಸ್ಕೋ: ವಿಶ್ವಾದ್ಯಂತ 150 ಕೋಟಿ ವಾಟ್ಸ್​ಆಪ್ ಬಳಕೆದಾರರ ಮೊಬೈಲ್​ಗಳು ಹ್ಯಾಕ್ ಆಗುವ ಆತಂಕ ಎದುರಾಗಿದ್ದು, ಆಪ್ ಅಪ್​ಡೇಟ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ವಾಟ್ಸ್​ಆಪ್ ಮೂಲಕ ಮೊಬೈಲ್​ಗೆ ಸ್ಪೈವೇರ್ ಇನ್​ಸ್ಟಾಲ್ ಮಾಡಿ ಬಳಕೆದಾರರ ಗೌಪ್ಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ವಾಟ್ಸ್​ಆಪ್ ಬಳಕೆ ಮಾಡದೇ ಇದ್ದರೂ ಫೋನ್ ಹ್ಯಾಕ್ ಆಗುತ್ತದೆ.

ಮಿಸ್ ್ಡಾಲ್ ನೀಡುವ ಮೂಲಕ ಸ್ಪೈವೇರ್ ಫೋನ್​ನಲ್ಲಿ ಇನ್​ಸ್ಟಾಲ್ ಮಾಡಬಹುದಾಗಿದೆ. ಇದು ಕಾಲ್ ಲಾಗ್​ನಲ್ಲಿಯೂ ಗೊತ್ತಾಗುವುದಿಲ್ಲ. ಹೀಗಾಗಿ ಆತಂಕ ಹೆಚ್ಚಾಗಿದ್ದು, ಭದ್ರತಾ ದೃಷ್ಟಿಯಿಂದ ಅಪ್​ಡೇಟ್ ಮಾಡಿಕೊಳ್ಳಲು ಬಳಕೆದಾರರಲ್ಲಿ ಕಂಪನಿ ಕೋರಿದೆ.

ಇಸ್ರೇಲ್ ಸಂಸ್ಥೆಯಿಂದ ಅಭಿವೃದ್ಧಿ: ಇಸ್ರೇಲ್​ನ ಸೈಬರ್ ಸರ್ವಿಲೆನ್ಸ್ ಕಂಪನಿ ಎನ್​ಎಸ್​ಒ ಗ್ರೂಪ್ ಈ ಸ್ಪೈವೇರ್ ಅಭಿವೃದ್ಧಿಪಡಿಸಿದೆ. ಇದನ್ನು ಗೌಪ್ಯ ಮಾಹಿತಿ ಕಲೆಹಾಕಲು ಸಿದ್ಧಪಡಿಸಲಾಗಿದೆ ಎಂಬ ಆರೋಪವನ್ನು ಸಂಸ್ಥೆ ತಳ್ಳಿ ಹಾಕಿದೆ. ಸರ್ಕಾರಿ ಏಜೆನ್ಸಿಯಿಂದ ಪರವಾನಗಿ ಪಡೆದುಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಅಪರಾಧ ಮತ್ತು ಉಗ್ರವಾದದ ವಿರುದ್ಧ ಹೋರಾಟದ ಉದ್ದೇಶದಿಂದ ರೂಪಿಸಲಾಗಿದೆ ಎಂದಿದೆ. ಆದರೆ ಮೂಲಗಳ ಪ್ರಕಾರ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಮೆಕ್ಸಿಕೊವರೆಗಿನ ಸರ್ಕಾರಗಳಿಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಬಗೆಗಿನ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಲು ಇದು ನೆರವಾಗುತ್ತದೆ. ಕಳೆದ 10 ದಿನಗಳಿಂದ ಸ್ಮಾರ್ಟ್​ಫೋನ್​ಗಳ ವಾಟ್ಸ್​ಆಪ್​ಗಳಲ್ಲಿ ಸ್ಪೈವೇರ್ ಕಂಡುಬಂದಿದೆ.

ಅತ್ಯಾಧುನಿಕ ಸ್ಪೈವೇರ್

ವಾಟ್ಸ್​ಆಪ್​ಗೆ ಹರಿಬಿಡಲಾಗಿರುವ ಸ್ಪೈವೇರ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇದರ ಮೂಲಕ ಆಯ್ದ ಸಂಖ್ಯೆಯ ಜನರನ್ನು ಟಾರ್ಗೆಟ್ ಮಾಡಿಕೊಳ್ಳ ಲಾಗಿದೆ ಎಂದು ಫೇಸ್​ಬುಕ್ ಹೇಳಿದೆ. ಈ ದಾಳಿಯನ್ನು ಖಾಸಗಿ ಕಂಪನಿಯ ಹಾಲ್​ವಾರ್ಕ್ ಮೂಲಕ ನಡೆಸಲಾಗುತ್ತಿದ್ದು, ಆರಂಭಿಕ ಹಂತದ ತನಿಖೆಯಲ್ಲಿ ವಾಟ್ಸ್ ಆಪ್ ಮೂಲಕ ಮಾನವ ಹಕ್ಕು ಸಂಘ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿರುವುದು ಕಂಡುಬಂದಿದೆ.

ಎನ್​ಎಸ್​ಒ ವಿರುದ್ಧ ಆರೋಪ

ಇಸ್ರೇಲ್​ನ ಎನ್​ಎಸ್​ಒ ಗ್ರೂಪ್ 2016ರಲ್ಲಿ ಮೊದಲ ಬಾರಿ ಮುನ್ನೆಲೆಗೆ ಬಂದಿತ್ತು. ಇದು ಸಂಯುಕ್ತ ಅರಬ್ ರಾಷ್ಟ್ರಕ್ಕೆ ಗೌಪ್ಯ ಮಾಹಿತಿಗಳನ್ನು ಕದಿಯಲು ನೆರವಾಗುತ್ತಿದೆ ಎಂದು ಕೆಲ ಸಂಶೋಧಕರು ಆರೋಪಿಸಿದ್ದರು. ಪೆಗಾಸಸ್ ಎನ್ನುವ ಇದರ ಪ್ರಾಡಕ್ಟ್ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿತ್ತು. ಇದರ ಮೂಲಕ ಫೋನ್ ಕ್ಯಾಮರಾ, ಮೈಕ್ರೋಫೋನ್​ಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಕಲೆ ಹಾಕುತ್ತಿತ್ತು.

Leave a Reply

Your email address will not be published. Required fields are marked *