ಸಂಗೀತದಿಂದ ಮನಸ್ಸಿಗೆ ಮುದ – ದೇಹಕ್ಕೆ ಆರೋಗ್ಯ : ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ

ಬೆಂಗಳೂರು: ಸಂಗೀತ ನಿರಂತರ ಅದಕ್ಕೆ ಕೊನೆ ಎಂಬುದಿಲ್ಲ. ಮನಸ್ಸಿಗೆ ಮುದ, ದೇಹಕ್ಕೆ ಆರೋಗ್ಯ ಮತ್ತು ಚೈತನ್ಯ ನೀಡುವ ಸಂಗೀತವನ್ನು ಎಲ್ಲರೂ ಕೇಳುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಶಾಸಕ ಎಲ್, ಎ. ರವಿಸುಬ್ರಹ್ಮಣ್ಯ ಹೇಳಿದರು.

ನಗರದ ಎನ್. ಆರ್. ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಶನಿವಾರ ನಡೆದ ‘ಉಪಾಸನಾ ಟ್ರಸ್ಟ್ – 25 ವರ್ಷಗಳ ಸಾರ್ಥಕ ಹೆಜ್ಜೆಗಳು’ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಆತ್ಮಸಂತೋಷಕ್ಕೆ ಹವ್ಯಾಸಗಳು ಮುಖ್ಯ. ಅದರಲ್ಲಿ ಸಂಗೀತ ಕೇಳುವುದು ಬಹಳ ಉತ್ತಮ ಹವ್ಯಾಸ. ಪ್ರತಿ ದಿನ ಆರಂಭದಲ್ಲಿ ಹಾಗೂ ರಾತ್ರಿ ಮಲಗುವಾಗ ಸಂಗೀತ ಕೇಳುವುದು ಉತ್ತಮ.ಸಂಗೀತದಿಂದ ಉತ್ತಮ ಸಂಸ್ಕಾರ ಸಾಧ್ಯ ಹಾಗಾಗಿ, ಮಕ್ಕಳಿಗೂ ಓದಿನ ಜೊತೆಗೆ ಸಂಗೀತ ಕೇಳುವುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಉಪಾಸನಾ ಟ್ರಸ್ಟ್ ಮೂಲಕ ಕಳೆದ 25 ವರ್ಷಗಳಿಂದ ಸಹಸ್ರಾರು ಕಂಠಗಳಲ್ಲಿ ಸಂಗೀತ ಹಾಡಿಸಿದ ಕೀರ್ತಿ ಉಪಾಸನಾ ಮೋಹನ್ ಅವರಿಗೆ ಸಲ್ಲುತ್ತದೆ. ಟ್ರಸ್ಟ್ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕವಿ, ಕಲಾವಿದರು, ಗಾಯಕರು, ಸಂಗೀತಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಇವರ ಈ ಸಂಗೀತ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, ನಾನು ಆರಂಭದಿಂದಲೂ ಉಪಾಸನಾ ಟ್ರಸ್ಟ್ ಜೊತೆಗೆ ಸಾಗಿ ಬಂದಿದ್ದೇನೆ. ಯಾವುದೇ ಒಂದು ಸಂಸ್ಥೆಯನ್ನು ಕಟ್ಟಿ ಅದನ್ನು ಆರ್ಥಪೂರ್ಣವಾಗಿ ನಡೆಸಿಕೊಂಡು ಬರುವುದು ಸಾಮಾನ್ಯ ವಿಷಯವಲ್ಲ. ಆದರೆ ಕೇವಲ ಕವಿ ಗೀತೆಗಳನ್ನು ಮಾತ್ರ ಹಾಡುತ್ತ ವೀರ ನಿಷ್ಠೆಯೊಂದಿಗೆ ಸಂಸ್ಥೆಯನ್ನು ನಡೆಸಿಕೊಂಡು ಬಂದಿರುವುದು ಉಪಾಸನಾ ಮೋಹನ್ ಅವರಿಗೆ ಸುಗಮ ಸಂಗೀಗದಲ್ಲಿ ಇರುವ ಆಸಕ್ತಿ, ಶ್ರದ್ಧೆ ಹಾಗೂ ನಿಷ್ಠೆಯನ್ನು ತೋರಿಸುತ್ತದೆ. ಆ ಮೂಲಕ ಅವರು ಪ್ರಸಿದ್ಧ ಕವಿಗಳ ಹಾಡುಗಳನ್ನು ಜನರಿಗೆ ಪರಿಚಯಿಸುವುದರ ಜೊತೆಗೆ ಯುವ ಕವಿಗಳಿಗೆ ಹಾಗೂ ಸಂಗೀತಗಾರರು ಮತ್ತು ಗಾಯಕರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದಿ. ಜಿ.ವಿ. ಅತ್ರಿ ಅವರ ನೆನಪಿನಲ್ಲಿ ಗಾಯಕಿ ಸುಪ್ರಿಯಾ ರಘುನಂದನ್ ಅವರಿಗೆ ‘ಉಪಾಸನಾ ಪ್ರಶಸ್ತಿ’ಯನ್ನು ಹಾಗೂ ಕೊಳಲು ವಾದಕ ದಿ. ಎನ್.ಎಸ್. ಮುರಳಿ ಅವರ ನೆನಪಿನಲ್ಲಿ ಕೀಬೋರ್ಡ್‌ವಾದಕ ಸಂಗೀತ್ ಥಾಮಸ್ ಅವರಿಗೆ ‘ನಾದೋಪಾಸನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕವಯಿತ್ರಿ ಮಂಗಳ ಎಂ. ನಾಡಿಗ್ ಅವರ ‘ಒಲವಿನ ಮಡಿಲು’ ಗೀತ ಗುಚ್ಛ ಬಿಡುಗಡೆ ಮಾಡಲಾಯಿತು. ಟ್ರಸ್ಟ್‌ನ ವಿದ್ಯಾರ್ಥಿಗಳು ಹಾಗೂ ಪ್ರಸಿದ್ಧ ಗಾಯಕ ಗಾಯಕಿಯರು ಕವಿಗಳ ಗೀತೆಗಳನ್ನು ಹಾಡಿದರು. ಗಾಯಕಿ ಬಿ.ಕೆ. ಸುಮಿತ್ರ, ಬೇಸ್ ಪಿಯು ಕಾಲೇಜು ಪ್ರಾಂಶುಪಾಲ ಡಾ ಜೆ. ಬಾಲಸುಬ್ರಹ್ಮಣ್ಯಂ, ಟ್ರಸ್ಟ್‌ನ ಸ್ಥಾಪಕ ಉಪಾಸನಾ ಮೋಹನ್ ಇತರರು ಇದ್ದರು.

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…